ಸೇವಾಸಂಗಮದ ಮೂಲಕ ಸಂಸ್ಕಾರಭರಿತ ಶಿಕ್ಷಣ

kota-7
Published on

ಕೋಟ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಸಂಸ್ಕಾರಭರಿತ ಶಿಕ್ಷಣ ಸಿಗಬೇಕು ಆ ಮೂಲಕ ಮಕ್ಕಳ ಭವಿಷ್ಯ ಸದೃಢವಾಗಿ ಬೆಳೆಯಲು ಸಾಧ್ಯ ಈ ದಿಸೆಯಲ್ಲಿ ಪಾಲಕರು ಮಕ್ಕಳ ಬಾಲ್ಯ ಶಿಕ್ಷಣವನ್ನು ಸೇವಾಸಂಗಮ ಶಿಶುಮಂದಿರದ ಮೂಲಕ ಶಿಕ್ಷಣ ಪ್ರಾರಂಭಿಸಿ ಎಂದು ಸೇವಾಸಂಗಮ ಶಿಶುಮಂದಿರದ ವಿಶ್ವಸ್ಥ ಮಂಡಳಿ ಪ್ರಮುಖ ಸುಬ್ರಹ್ಮಣ್ಯ ಹೊಳ್ಳ ಹೇಳಿದರು.

ಇತ್ತೀಚೆಗೆ ಕೋಟದ ಸೇವಾಸಂಗಮ ಶಿಶುಮಂದಿರದಲ್ಲಿ ನಡೆದ ಸಾಮೂಹಿಕ ಹುಟ್ಟುಹಬ್ಬ ಹಾಗೂ ಬೆಳದಿಂಗಳ ಊಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೋಟ ಸೇವಾಸಂಗಮ ಶಿಶು ಮಂದಿರ ಅಧ್ಯಕ್ಷೆ ನಾಗಲಕ್ಷ್ಮೀ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪಂಚವರ್ಣ ಯುವಕ ಮಂಡಲ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು. ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಸ್ವಾಗತಿಸಿ, ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ವಂದಿಸಿದರು. ನೂತನ ಕಾರ್ಯದರ್ಶಿ ಕಲಾವತಿ ಅಶೋಕ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net