ನಾಯಕತ್ವದಿಂದ ಸಾಮಾಜಿಕ ಜವಾಬ್ದಾರಿ : ಡಾ.ಶೇಖರ್ ನಾಯ್ಕ ಹೇಳಿಕೆ

New Project (19)
Published on

ಉಳ್ಳಾಲ: ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಲು ನಾಯಕತ್ವ ಮುಖ್ಯ, ಶೈಕ್ಷಣಿಕ ಜೀವನದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಧನಾತ್ಮಕ ತತ್ವಗಳನ್ನು ಕಲಿಕಾ ಪೂರಕವಾಗಿ ಬಳಸಿಕೊಂಡು ಈ ಸ್ಥಾನ ತಲುಪಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾಲಯ ವ್ಯವಹಾರ ನಿರ್ವಹಣಾ ವಿಭಾಗದ ಅಧ್ಯಕ್ಷ ಡಾ.ಶೇಖರ್ ನಾಯ್ಕ ಹೇಳಿದರು.

ತಲಪಾಡಿ ಶಾರದಾ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಚೆನ್ನ ಪ್ರಮಾಣ ವಚನ ಸ್ವೀಕರಿಸಿದರು. ಪ್ರಾಂಶುಪಾಲೆ ಡಾ.ಮೀನಾ ಜೆ.ಪಣಿಕ್ಕರ್, ವಿಭಾಗ ಮುಖ್ಯಸ್ಥರಾದ ರೇಷ್ಮಾ ಪಿ.ವಿ., ಸುಪ್ರಿಯಾ ಎಂ.ಕೆ. ಹಾಗೂ ಅಮಿತಾ ಆಳ್ವ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಮೇಘನಾ ಸ್ವಾಗತಿಸಿ. ದೀಕ್ಷಾ ವಂದಿಸಿ, ಶಿವಾನಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net