VIDEO| ವಿದ್ಯಾರ್ಥಿನಿ ಸಾವಿನಿಂದ ರೊಚ್ಚಿಗೆದ್ದ ಸಾರ್ವಜನಿಕರಿಂದ ಲಾರಿಗೆ ಬೆಂಕಿ

acident 9 mar 20
Published on

ದಾವಣಗೆರೆ: ಮರಳು ತುಂಬಿದ ಲಾರಿ ಹರಿದ ಪರಿಣಾಮ ಶಾಲಾ ಬಾಲಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹೊನ್ನಾಳಿ ತಾಲೂಕಿನ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದಿವ್ಯಾ ಪಾಟೀಲ್​ (8) ಮೃತಪಟ್ಟ ಬಾಲಕಿ. ಬಾಲಕಿ ಮೃತಪಟ್ಟ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಮರಳು ಲಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೋಟೆಹಾಳ್ ಗ್ರಾಮದ ವಿದ್ಯಾರ್ಥಿನಿ ದಿವ್ಯಾ ಪಾಟೀಲ್​ ಸೋಮವಾರ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದರು. ಮರಿಗೊಂಡನಹಳ್ಳಿ ಬಳಿ ರಸ್ತೆ ದಾಟುವಾಗ ವೇಗದಿಂದ ಬಂದ ಲಾರಿ ಆಕೆ ಮೇಲೆ ಹರಿಯಿತು.

ಬಾಲಕಿ ಸ್ಥಳದಲ್ಲೇ ಮೃತಪಟ್ಟ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಕುಟುಂಬದವರು ಲಾರಿಗೆ ಬೆಂಕಿ ಹಚ್ಚಿದರು. ಸ್ಥಳೀಯರು ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು. ಬೆಂಕಿ ನಂದಿಸಲು ಅಗ್ನಿಶಾಮಕ ವಾಹನ ಸ್ಥಳಕ್ಕೆ ಆಗಮಿಸಿತು. ಬೆಂಕಿ ನಂದಿಸಲು ಗ್ರಾಮಸ್ಥರು ಅವಕಾಶ ಕೊಡದೆ ಪ್ರತಿಭಟಿಸಲು ಮುಂದಾದರು. ಬಳಿಕ ಮನವೊಲಿಸಿ ಪರಿಸ್ಥಿತಿ ನಿಯಂತ್ರಿಸಲಾಯಿತು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net