blank

ಕಳಪೆ ಹೆಲ್ಮೆಟ್ ಮಾರಿದರೆ ಕಠಿಣ ಕ್ರಮ

blank

ನವದೆಹಲಿ: ಕಳಪೆ ಗುಣಮಟ್ಟದ ಹೆಲ್ಮೆಟ್​ಗಳ ತಯಾರಕರು ಮತ್ತು ಮಾರಾಟಗಾರರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ದೇಶದಲ್ಲಿ 21 ಕೋಟಿ ದ್ವಿಚಕ್ರವಾಹನಗಳಿದ್ದು, 1988ರ ಮೋಟಾರ್ ವಾಹನ ಕಾಯ್ದೆಯಡಿ ಹೆಲ್ಮೆಟ್ ಧರಿಸುವುದು ಕಡ್ಡಾಯ. ದ್ವಿಚಕ್ರವಾಹನ ಸವಾರರ ಸುರಕ್ಷತೆಗಾಗಿಯೂ ಈ ಕ್ರಮ ಅನಿವಾರ್ಯ ಎಂದು ಗ್ರಾಹಕರ ವ್ಯವಹಾರ ಇಲಾಖೆ ಮತ್ತು ಭಾರತೀಯ ಮಾನಕ, ಪ್ರಮಾಣೀಕರಣ ಕಚೇರಿ ಹೇಳಿಕೆಯಲ್ಲಿ ತಿಳಿಸಿವೆ. 2021ರಿಂದ ಗುಣಮಟ್ಟ ನಿಯಂತ್ರಣ ಆದೇಶ ಜಾರಿಯಲ್ಲಿದ್ದು, ಎಲ್ಲ ದ್ವಿಚಕ್ರವಾಹನ ಚಾಲಕರಿಗೆ ಬಿಐಎಸ್ ಮಾನದಂಡಗಳಡಿ ಬಿಐಎಸ್ ಚಿಹ್ನೆಯೊಂದಿಗೆ ಪ್ರಮಾಣೀಕರಣ ಪಡೆದ ಹೆಲ್ಮೆಟ್​ಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ವಿವರಿಸಿವೆ.

Share This Article

ಇವುಗಳ ಜೊತೆ ಮುಲ್ತಾನಿ ಮೆಟ್ಟಿ ಫೇಸ್‌ ಪ್ಯಾಕ್‌ ಮಾಡಿ ಮುಖಕ್ಕೆ ಹಚ್ಚಿ, ರಿಸಲ್ಟ್‌ ನೀವೇ ನೋಡಿ! Skin Care

Skin Care : ತ್ವಚೆಯ ಆರೈಕೆಯಲ್ಲಿ ನಾವು ನೈಸರ್ಗಿಕವಾಗಿ ಬಳಸುವ ಮುಲ್ತಾನಿ ಮಿಟ್ಟಿ ಕೂಡ ಒಂದು.…

ಈರುಳ್ಳಿ ಕತ್ತರಿಸುವಾಗ ಹೀಗೆ ಮಾಡಿದರೆ ಕಣ್ಣೀರೇ ಬರುವುದಿಲ್ಲ..ನೀವೂ ಒಮ್ಮೆ ಟ್ರೈ ಮಾಡಿ | Onions

Onions: ಈರುಳ್ಳಿ ಕತ್ತರಿಸುವುದು ಅನೇಕರಿಗೆ ಕಷ್ಟದ ಕೆಲಸವಾಗಿದೆ. ಕೆಲವರು ಯಾವುದೇ ಸಮಸ್ಯೆಯಿಲ್ಲದೆ ಈರುಳ್ಳಿಯನ್ನು ಕತ್ತರಿಸಿದರೆ, ಇತರರು…