ಆಂಜನೇಯನ ಧ್ಯಾನದಿಂದ ಬಲ ವೃದ್ಧಿ

gan-4
Published on

ಕುಂದಾಪುರ: ಪರಮ ರಾಮಭಕ್ತನಾದ ಆಂಜನೇಯನ ಧ್ಯಾನ, ಪೂಜೆ ಮಾಡುವುದರಿಂದ ಬಲ, ಜ್ಞಾನ, ಆರೋಗ್ಯ ಸಿದ್ಧಿಸುತ್ತದೆ ಎಂದು ನೆಂಪು ಅನಂತೇಶ ಭಟ್ ಹೇಳಿದರು.

ಕುಂದಾಪುರ ತಾಲೂಕು ಗುಲ್ವಾಡಿಯ ಶ್ರೀ ಆಂಜನೇಯ ದೇವಾಲಯದಲ್ಲಿ ದೇವರ ಪ್ರತಿಷ್ಠಾನೆ ವರ್ಧಂತಿ ಮತ್ತು ವೀರ ವಿಜಯೋತ್ಸವ ಸಮಾರಂಭದ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಮಾತನಾಡಿದರು.

ವಾರ್ಷಿಕ ವಧರ್ಂತಿ ಉತ್ಸವದ ಅಂಗವಾಗಿ ಆಂಜನೇಯನಿಗೆ ನರಸಿಂಹ ಮೂರ್ತಿ ಉಪಾಧ್ಯ ಮತ್ತು ಶ್ರೀನಿವಾಸ ಉಪಾಧ್ಯ ನೇತೃತ್ವದಲ್ಲಿ ಸ್ನಪನಾಧಿವಾಸ ಹೋಮ, ಸುಂದರಕಾಂಡ ಪಾರಾಯಣ ನಡೆಸಿ ಕಲಶಾಭಿಷೇಕ ನೆರವೇರಿಸಲಾಯಿತು. ನಂತರ ರಂಗಪೂಜೆ, ಮಹಾಪೂಜೆ ನೆರವೇರಿತು. ದೇವಳ ಆಡಳಿತ ಸಮಿತಿ ಅಧ್ಯಕ್ಷ ಚೇತನ್ ರೈ, ಸದಸ್ಯರು, ರಜತ ಕವಚದ ದಾನಿ ಉಪ್ಪಿನಕುದ್ರು ವೆಂಕಟರಮಣ ಹೊಳ್ಳ, ಅವನೀಶ ಹೊಳ್ಳ ಮತ್ತು ಕುಟುಂಬಸ್ಥರು, ಸೇವಾಕರ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net