ಕಿನ್ನಿಗೋಳಿ: ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತೆ ಅಂಗವಾಗಿ ಕಿನ್ನಿಗೋಳಿ ಸೇಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್ ವತಿಯಿಂದ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಹಮ್ಮಿಕೊಳ್ಳಲಾಗಿತ್ತು.
ಸಂಚಾರ ನಿಯಮಗಳನ್ನು ಅಗತ್ಯವಾಗಿ ಪಾಲಿಸಬೇಕು. ವೇಗವಾಗಿ ವಾಹನ ಚಾಲನೆ ವಾಡಬಾರದು ಹಾಗೂ ಸಾರ್ವಜನಿಕರು ರಸ್ತೆ ದಾಟುವಾಗ ಕೆಂಪು ದೀಪ ಗಮನಿಸಿ ದಾಟಬೇಕು ಎಂಬಿತ್ಯಾದಿ ಪೋಸ್ಟರ್ ಮತ್ತು ಭಿತ್ತಿ ಪತ್ರಗಳನ್ನು ಹಿಡಿದು ಕಿನ್ನಿಗೋಳಿ ಸೇಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿಗಳು ಕಿನ್ನಿಗೋಳಿ ಸೆಂಟ್ರಲ್ ಸ್ಕೂಲ್‌ನಿಂದ ಕಿನ್ನಿಗೋಳಿ ರಸ್ತೆಯ ಮೂಲಕ ಕಿನ್ನಿಗೋಳಿ ಬಸ್ ತಂಗುದಾಣ ತಲುಪಿ ಅಲ್ಲಿ ಬೀದಿ ನಾಟಕ ಪ್ರದರ್ಶಿಸಿದರು.
ವಾರ್ಗದುದ್ದಕ್ಕೂ ಸಂಚಾರ ನಿಯಮಗಳಿರುವ ಭಿತ್ತಿ ಪತ್ರಗಳನ್ನು ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೋರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.
ಸೇಂಟ್ ಮೇರಿಸ್ ಸೆಂಟ್ರಲ್ ಸ್ಕೂಲ್‌ನ ಸಂಚಾಲಕ ಜೋಕಿಮ್ ಫರ್ನಾಂಡಿಸ್, ಮಂಗಳೂರಿನ ಆರ್.ಟಿ.ಒ. ಆಫೀಸರ್ ಶ್ರೀಧರ್ ಕೆ.ಮಲ್ಲಡ್, ಮಂಗಳೂರು ಉತ್ತರ ವಲಯದ ಸಂಚಾರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕೆ.ಎಂ.ಶರೀಫ್, ಶಾಲಾ ಪ್ರಾಂಶುಪಾಲ ಲ್ಯಾನ್ಸಿ ಜೋಯಲ್ ಸಲ್ಡಾನ್ಹ, ರಕ್ಷಕ – ಶಿಕ್ಷಕ ಸಂದ ಉಪಾಧ್ಯಕ್ಷ ಸ್ಟಾೃನಿ ಪಿಂಟೊ, ಕಾರ್ಯದರ್ಶಿ ದಿವ್ಯಾ ಪಿಂಟೊ, ಖಜಾಂಚಿ ಸ್ಟೀವನ್ ಡಿಕುನ್ಹಾ ಮೊದಲಾದವರಿದ್ದರು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.