ಮೂಡುಬಿದಿರೆ: ಹಾವೇರಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯಕ್ಕೆ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಳವಾರ ಭೇಟಿ ನೀಡಿದರು.
ಕುಲಪತಿ ಡಾ. ಟಿ. ಎಂ ಭಾಸ್ಕರ್ ಅವರು ಸ್ವಾಮೀಜಿಯವರಿಗೆ ವಸ್ತು ಸಂಗ್ರಹಾಲಯ ವಿವಿಧ ಚಟುವಟಿಕೆಗಳ ಬಗ್ಗೆ ವಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ ಆಶ್ರಯದಲ್ಲಿ ರಾಜ್ಯಮಟ್ಟದ ಜಾನಪದ ಕಮ್ಮಟ ಆಯೋಜಿಸುವ ಕುರಿತು ಕುಲಪತಿಗಳೊಂದಿಗೆ ಸ್ವಾಮೀಜಿ ಸವಾಲೋಚಿಸಿದರು. ಸ್ವಾಮೀಜಿಯವರನ್ನು ಗೌರವಿಸಲಾಯಿತು.
ಪ್ರಮುಖರಾದ ಡಾ.ಪ್ರೇಮ್ ಕುವಾರ್, ಡಾ.ವೆಂಕನ್ ಗೌಡ, ಡಾ.ರಾಜಶೇಖರ್, ಷಹಾಜನ್ ಮುದ ಕವಿ, ಪ್ರೊ.ಭುವನ್ ಅಕ್ಕೋಳೆ, ಸೋಮಶೇಖರ್, ಪ್ರಮೋದ್, ಮಹಾವೀರ ಜೈನ್ ಉಪಸ್ಥಿತರಿದ್ದರು.