ಫೆ.26ರಂದು ವಿವೇಕ ಕಾಯಕರತ್ನ ಪ್ರಶಸ್ತಿ ಪ್ರದಾನ

Published on

ಕಿನ್ನಿಗೋಳಿ: ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯು ಫೆ.26ರಂದು ಸಂಜೆ ಕಿನ್ನಿಗೋಳಿ ಚರ್ಚ್ ಮೈದಾನದಲ್ಲಿ ಸ್ವಾಮಿ ವಿವೇಕಾನಂದರ 162ನೇ ಜಯಂತ್ಯೋತ್ಸವ ಅಂಗವಾಗಿ ಸಾಧಕರಿಗೆ ವಿವೇಕ ಕಾಯಕ ರತ್ನ ಪ್ರಶಸ್ತಿ ನೀಡಲಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಡಾ.ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿಮನೆ ಬುಧವಾರ ಹೇಳಿದರು.

ಕೇಮಾರು ಶ್ರೀ ಈಶವಿಟ್ಠಲದಾಸ ಸ್ವಾಮೀಜಿ, ಜೋಕಿಂ ಫರ್ನಾಂಡಿಸ್, ಮೂಲ್ಕಿ ದುಗ್ಗಣ್ಣ ಸಾವಂತರು, ಡಾ. ಎಸ್. ಶ್ರೀನಿವಾಸ ಶೆಟ್ಟಿ, ಭುವನಾಭಿರಾಮ ಉಡುಪ, ಐಕಳಬಾವ ದೇವಿಪ್ರಸಾದ ಶೆಟ್ಟಿ, ಶ್ರೀಮತಿ ರಜನೀರಾಜ್, ಅಶೋಕ ಶೆಟ್ಟ, ಜಗದೀಶ ಅಧಿಕಾರಿ, ಕುಶಲ ಪೂಜಾರಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಶಿಲ್ಪಕಲಾಸಾಧಕ ವಾಸುದೇವ ಆಚಾರ್ಯ, ಕ್ಷೌರಿಕ ವತ್ತಿಯ ಶಿವಾನಂದ ಸಾಲ್ಯಾನ್, ಸ್ಮಶಾನ ಕಾಯಕದ ವೆಂಕಪ್ಪ ನಾಯ್ಕ, ದೈವದರ್ಶನ ಪಾತ್ರಿ ಯಾದವ ಪೂಜಾರಿ, ದೀವಟಿಗೆ ಹಿಡಿಯುವ ವಿಶ್ವನಾಥ ಮಡಿವಾಳ, ಅಂಚೆ ವಿತರಕರಾದ ಲಕ್ಷ್ಮೀ ಪೂಜಾರಿ, ಸೈನಿಕ ಶಂಕರ ಪುತ್ತೂರು, ಪೌರ ಕಾರ್ಮಿಕ ಸೇವೆಯ ಶಶಿಕಲಾ, ನೇಕಾರ ಆನಂದ ಶೆಟ್ಟಿಗಾರ, ಕಲಾರಂಗದ ಪ್ರಕಾಶ ಆಚಾರ್ಯ, ಕವ್ಮಾರ ವಾಧವ ಆಚಾರ್ಯ, ಕಂಬಳದ ದಿವಾಕರ ಚೌಟ, ಹೈನುಗಾರಿಕೆಯ ಲಲಿತಾ ಶೆಟ್ಟಿ, ರೈತ ಸತೀಶ ಶೆಟ್ಟಿ ಪಂಜ ಅವರನ್ನು ವಿವೇಕ ಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ವೈದ್ಯಕೀಯ ಸೇವೆಗಾಗಿ ಜೀವಿತಾ, ಬಹುಮುಖ ಸಾಧಕ ಡಾ.ಹರಿಕೃಷ್ಣ ಪುನರೂರು, ಬಾಲಪ್ರತಿಭೆ ಕ್ಷಿತಿಜ್ ಕೆ. ಅತ್ಯುತ್ತಮ ಸೇವಾ ಸಂಸ್ಥೆಗಳಾದ ಗೋಳಿಜಾರ ಶ್ರೀರಾಮ ಯುವಕ ವಂದ, ತೋಕೂರು ಶ್ರೀದೇವೀ ಮಹಿಳಾ ಮಂಡಳಿಗಳನ್ನು ಸನ್ಮಾನಿಸಲಾಗುವುದು. ಬಳಿಕ ವಿಜಯ ಕಲಾವಿದರಿಂದ ತೊಟ್ಟಿಲ್ ನಾಟಕ, ಜನನಿ ಮೆಲೋಡಿಸ್ ಅವರಿಂದ ಸಂಗೀತ ರಸಮಂಜರಿ ನಡೆಯಲಿದೆ ಎಂದು ಜಗನ್ನಾಥ ಶೆಟ್ಟಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net