

Donald Trump: ವಲಸೆ ದಾಳಿಯನ್ನು ಯುರೋಪ್ ಒಟ್ಟಾಗಿ ಎದುರಿಸಬೇಕು. ಇಲ್ಲವಾದರೇ, ಇದು ಯುರೋಪ್ ಆನ್ನು ಕೊಲ್ಲುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಹೇಳಿದ್ದಾರೆ.
ಸ್ಕಾಟ್ಲ್ಯಾಂಡ್ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ನಾನು ಹೇಳಬಹುದಾದ ಕೆಲವು ವಿಷಯಗಳಿವೆ, ಆದು ವಲಸೆಯ ಬಗ್ಗೆ. ನೀವು ವಲಸೆ ವಿರುದ್ಧ ಒಟ್ಟುಗೂಡಬೇಕು. ಒಗ್ಗಟ್ಟು ಆಗದಿದ್ದರೇ ಇನ್ನು ಮುಂದೆ ನಿಮ್ಮ ಯುರೋಪ್ ಇರುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದಾರೆ.
ನಿಮಗೆ ಗೊತ್ತಾ, ಕಳೆದ ತಿಂಗಳು ಅಮೆರಿಕಕ್ಕೆ ಯಾರೂ ಪ್ರವೇಶಿಸಲಿಲ್ಲ. ಬಿಡೆನ್ ಅಧಿಕಾರಕ್ಕೆ ಬಂದಾಗ ನಮ್ಮ ದೇಶಕ್ಕೆ ಬಂದ ಬಹಳಷ್ಟು ಕೆಟ್ಟ ಜನರನ್ನು ನಾವು ಹೊರತೆಗೆದಿದ್ದೇವೆ. ಆದರೆ, ನೀವು ನಿಮ್ಮ ದೇಶಗಳಿಗೆ ಹಾಗೆ ಆಗಲು ಅವಕಾಶ ನೀಡುತ್ತಿದ್ದೀರಿ. ಈ ಭಯಾನಕ ವಲಸೆ ಆಕ್ರಮಣವನ್ನು ನಿಲ್ಲಿಸಬೇಕು.ಈ ವಲಸೆ ಯುರೋಪನ್ನು ಕೊಲ್ಲುತ್ತಿದೆ ಎಂದು ಹೇಳಿದರು.
ಯುರೋಪ್ನಲ್ಲಿ ವಲಸೆಯು ಪ್ರಮುಖ ಸಮಸ್ಯೆಯಾಗಿದೆ. ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಈ ಹಿಂದೆ ಮಾಡಿದ ಪ್ರಮುಖ ಭಾಷಣದಲ್ಲಿ ವಲಸೆ ನಿಯಂತ್ರಣಗಳ ಯೋಜನೆಗನ್ನು ಅನಾವರಣಗೊಳಿಸಿದ್ದರು. ಆಗ ದೇಶವು "ಅಪರಿಚಿತರ ಜನರ ದ್ವೀಪ"ವಾಗುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸ್ಟಾರ್ಮರ್ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಪರಸ್ಪರ ವಲಸೆ ಒಪ್ಪಂದವನ್ನು ಘೋಷಿಸಿದರು. ಇಟಲಿ ಕೂಡ ವಲಸೆಯ ಬಗ್ಗೆ ಕಠಿಣ ನಿಲುವನ್ನು ಅಳವಡಿಸಿಕೊಂಡಿದೆ, ಪ್ರಧಾನಿ ಜಾರ್ಜಿಯಾ ಮೆಲೋನಿ ಕೂಡ ದೇಶವನ್ನು "ಯುರೋಪಿನ ನಿರಾಶ್ರಿತರ ಶಿಬಿರ"ವಾಗಲು ಬಿಡುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು.(ಏಜೆನ್ಸೀಸ್)