

ಸುಳ್ಯ: ಮಾನಸಿಕ ಅಸ್ವಸ್ಥನೋರ್ವ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದು ಆತನನ್ನು ಪೊಲೀಸರು ಠಾಣೆಗೆ ಕೊಂಡೊಯ್ದ ಘಟನೆ ಶನಿವಾರ ನಡೆದಿದೆ.
ಸುಳ್ಯದಿಂದ ಸಂಪಾಜೆ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಬಂದ ವ್ಯಕ್ತಿಯೋರ್ವ ಅರಂತೋಡು ಮುಖ್ಯಪೇಟೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ, ಸಾರ್ವಜನಿಕರಿಗೆ ಕಲ್ಲು ಎಸೆದಿದ್ದು, ಸ್ಥಳೀಯರು ಕಲ್ಲುಗುಂಡಿ ಹೊರಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ಗೂನಡ್ಕದ ಬಳಿ ಆತನನ್ನು ಹಿಡಿದು ಕಲ್ಲುಗುಂಡಿ ಹೊರ ಠಾಣೆಗೆ ಕರೆದೊಯ್ದು ವಿಚಾರಿಸಿದ್ದು ಆತ ಮಾನಸಿಕ ಅಸ್ವಸ್ಥತೆಗೆ ಒಳಗಾದ ವ್ಯಕ್ತಿ ಎಂದರಿತು ಆತನ ಕುಟುಂಬಿಕರನ್ನು ಸಂಪರ್ಕಿಸಿದ್ದಾರೆ.