

ಕಾಸರಗೋಡು: ತಳಿಪರಂಬದ ಮಯ್ಯತ್ ಎಂಬಲ್ಲಿ ಮಹಿಳೆ ಕತ್ತಿನಿಂದ ಎಗರಿಸಿದ್ದ ಒಂದುಕಾಲು ಪವನ್ ಚಿನ್ನದ ಸರವನ್ನು ಕಾಸರಗೋಡಿನ ಜುವೆಲ್ಲರಿಯೊಂದರಿಂದ ತಳಿಪರಂಬ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಿನ್ನದ ಸರ ಕಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿದ್ದ ಬೇಕಲ ಉದುಮ ನಿವಾಸಿ ಇಜಾಸ್ ಹಾಗೂ ಸುಳ್ಯ ನಿವಾಸಿ ಅಬ್ದುಲ್ ರಹಮಾನ್ ಎಂಬುವರನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆಗೊಳಪಡಿಸಿದಾಗ ಮಹಿಳೆ ಕತ್ತಿನಿಂದ ಕಸಿದ ಸರವನ್ನು ಕಾಸರಗೋಡಿನ ಜುವೆಲ್ಲರಿಗೆ ಮಾರಾಟ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದರು. ಮೇ 22ರಂದು ಮಯ್ಯಂ ವರಡೂರು ಕ್ಷೇತ್ರ ಸನಿಹದ ನಿವಾಸಿ ಸುಲೋಚನಾ ಎಂಬುವರ ಕತ್ತಿನಿಂದ ಚಿನ್ನದ ಸರವನ್ನು ಬೈಕ್ನಲ್ಲಿ ಆಗಮಿಸಿದ್ದ ಆರೋಪಿಗಳು ಕಸಿದು ಪರಾರಿಯಾಗಿದ್ದರು. ತನಿಖೆ ಮಧ್ಯೆ ಬೇಕಲ ಠಾಣೆ ಪೊಲೀಸರು ಮಹಮ್ಮದ್ ಇಜಾಸ್ನನ್ನು ಬಂಧಿಸಿ ಪಯ್ಯನ್ನೂರು ಠಾಣೆ ಪೊಲೀಸರಿಗೆ ಹಸ್ತಾಂತರಿಸಿದ್ದರು. ಅಬ್ದುಲ್ ರಹಮಾನ್ನನ್ನು ಈ ಹಿಂದೆ ಬಂಧಿಸಲಾಗಿತ್ತು.