ಭಾರೀ ಕುಸಿತ ಕಂಡ ಷೇರುಪೇಟೆ; ಸೆನ್ಸೆಕ್ಸ್ 519 ಅಂಕ ಇಳಿಕೆ: 2 ಲಕ್ಷ ಕೋಟಿ ರೂ. ನಷ್ಟ! | Stock Market

Bbau-2025-10-31T205113.975
Published on

ಮುಂಬೈ: ದೇಶೀಯ ಷೇರು (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ (ನ.04) ಭಾರೀ ಇಳಿಕೆ ಕಂಡಿದೆ.

ಸೆನ್ಸೆಕ್ಸ್ 519 ಅಂಕಗಳ ನಷ್ಟದೊಂದಿಗೆ ಅಥವಾ ಶೇಕಡಾ 0.62 ರಷ್ಟು ಕುಸಿತದೊಂದಿಗೆ 83,459.15 ಕ್ಕೆ ಕೊನೆಗೊಂಡಿದೆ. ಆದರೆ, ನಿಫ್ಟಿ50 166 ಅಂಕಗಳ ಕುಸಿತದೊಂದಿಗೆ 25,597.65 ಕ್ಕೆ ಸ್ಥಿರವಾಯಿತು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.26 ಮತ್ತು ಶೇಕಡಾ 0.69 ರಷ್ಟು ಕುಸಿದಿವೆ.

ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಸಂಚಿತ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 472.5 ಲಕ್ಷ ಕೋಟಿ ರೂಗಳಿಂದ 470 ಲಕ್ಷ ಕೋಟಿ ರೂ.ಗಿಂತ ಕಡಿಮೆಗೆ ಇಳಿದಿದ್ದರಿಂದ ಮಂಗಳವಾರ ಹೂಡಿಕೆದಾರರು 2 ಲಕ್ಷ ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದರು ಎಂದು ವರದಿಯಾಗಿದೆ.

ಷೇರುಪೇಟೆ ಕುಸಿತಕ್ಕೆ ಕಾರಣ?

ಅಮೆರಿಕದ ಮಾರುಕಟ್ಟೆಯಾದ ವಾಲ್​ಸ್ಟ್ರೀಟ್​ನಲ್ಲಿ​ AI ಮತ್ತು ಮೆಗಾ ಟೆಕ್​ ಷೇರುಗಳು ಕುಸಿತದತ್ತ ಸಾಗುತ್ತಿವೆ ಎಂಬ ಕಳವಳ ಹೆಚ್ಚುತ್ತಿರುವ ಹಿನ್ನೆಲೆ ಮಂಗಳವಾರ ಪ್ರಮುಖ ಮಾರುಕಟ್ಟೆಗಳಲ್ಲಿ ಭಾರೀ ಲಾಭದ ಬುಕ್ಕಿಂಗ್​ ನಷ್ಟನ್ನು ಅನುಭವಿಸಿದವು ಎಂದು ವರದಿ ಉಲ್ಲೇಖಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net