Stock Market : ಸೋಮವಾರದ ಆರಂಭಿಕ ವಹಿವಾಟು ಭಾರೀ ಕುಸಿತ: ಸೆನ್ಸೆಕ್ಸ್ 451 ಅಂಕ ಇಳಿಕೆ

untitled-design-2025-09-26t195106090-68d6a168a3f10
Published on

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ(ಅ.13) ಆರಂಭಿಕ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ.

ನವೆಂಬರ್ 1 ರಿಂದ ಜಾರಿಗೆ ಬರುವಂತೆ ಅಮೆರಿಕ ಚೀನಾದ ಸರಕುಗಳ ಮೇಲೆ ಹೆಚ್ಚುವರಿ ಶೇ.100 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ ನಂತರ ಜಾಗತಿಕ ಮಾರುಕಟ್ಟೆಗಳಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಹೀಗಾಗಿ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರೀ ಕುಸಿತ ಕಂಡಿವೆ.

ಬಿಎಸ್‌ಇಯ 30 ಷೇರು ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ 451.82 ಪಾಯಿಂಟ್‌ಗಳ ಕುಸಿತ ಕಂಡು 82,049 ಕ್ಕೆ ತಲುಪಿದೆ. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 109.55 ಪಾಯಿಂಟ್‌ಗಳ ಕುಸಿತ ಕಂಡು 25,175.80 ಕ್ಕೆ ತಲುಪಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net