6G ಫೋನ್‌ಗಳು ಯಾವಾಗ ಚಾಲ್ತಿಗೆ ಬರಲಿವೆ? ಅವು 5G ಗಿಂತ ಎಷ್ಟು ಭಿನ್ನವಾಗಿವೆ ಎಂಬುದನ್ನು ತಿಳಿಯಿರಿ| 6g phones

6g
Published on

6g phones; ತಂತ್ರಜ್ಞಾನದ ಪ್ರಪಂಚವು ಪ್ರತಿದಿನ ಹೊಸ-ಹೊಸ ಬದಲಾವಣೆಗಳಿಗೆ ಒಂದಿಕೊಳ್ಳುತ್ತಿದೆ. ಪ್ರಸ್ತುತ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇದೀಗ 5G ನೆಟ್‌ವರ್ಕ್‌ಗಳ ಸೇವೆಯೊಂದಿಗೆ ಜನರು ಹೆಚ್ಚಿನ ವೇಗದ ಇಂಟರ್ನೆಟ್​ಅನ್ನು ಪಡೆಯುತ್ತಿದ್ದಾರೆ. ಅಷ್ಟರಲ್ಲಾಗಲೇ ಇದೀಗ ಎಲ್ಲರ ಗಮನ 6G ಕಡೆಯತ್ತ ಇದೆ. ಇದನ್ನು ಮೊಬೈಲ್ ಕ್ಷೇತ್ರದಲ್ಲಿ ಮುಂದಿನ ಬಹುದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ. ಹಾಗಿದ್ರೆ ನಮ್ಮ ಕೈಯಲ್ಲಿ 6G ಫೋನ್‌ಗಳು ಯಾವಾಗ ಇರುತ್ತವೆ ಮತ್ತು ಅದು 5G ಗಿಂತ ಎಷ್ಟು ಭಿನ್ನವಾಗಿರುತ್ತದೆ ಎಂಬುದರ ಬಗ್ಗೆ ತಿಳಿಯೋಣ.

6G ಪೋನುಗಳು ಯಾವಾಗ ಬರಲಿವೆ

2020 ರಿಂದ 6G ತಂತ್ರಜ್ಞಾನದ ಸಂಶೋಧನೆ ವೇಗಗತಿಯಲ್ಲಿ ಸಾಗುತ್ತಿದೆ ಎಂದು ತಜ್ಞರು ವಿವರಿಸಿದ್ದಾರೆ. ಇದರ ಸಲುವಾಗಿ ಜಪಾನ್, ದಕ್ಷಿಣ ಕೊರಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾ ದೇಶಗಳು ವೇಗವಾಗಿ ಕೆಲಸ ಮಾಡುತ್ತಿವೆ. ವರದಿಗಳ ಪ್ರಕಾರ, 2030 ರ ವೇಳೆಗೆ 6G ನೆಟ್‌ವರ್ಕ್‌ಗಳು ಬಳಕೆಗೆ ಬರಬಹುದು ಎಂದು ಹೇಳಲಾಗಿದೆ. ಸರ್ಕಾರ ಮತ್ತು ಹಲವಾರು ಟೆಕ್ ಕಂಪನಿಗಳು 6G ಗೆ ತಯಾರಿ ನಡೆಸುತ್ತಿರುವುದರಿಂದ ಭಾರತವೂ ಹಿಂದೆ ಬಿದ್ದಿಲ್ಲ. ಮುಂದಿನ ಐದರಿಂದ ಆರು ವರ್ಷಗಳಲ್ಲಿ 6G ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

6G ಹಾಗೂ 5G ನಡುವಿನ ವ್ಯತ್ಯಾಸ

ಈ ಎರೆಡರಲ್ಲೂ ಸಹ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. 5G ಡೌನ್‌ಲೋಡ್ ವೇಗವು 10 Gbps ತಲುಪಿದರೆ, 6G 100 Gbps ಅಥವಾ ಅದಕ್ಕಿಂತ ಹೆಚ್ಚಿನ ವೇಗವನ್ನು ತಲುಪಲಿದೆ. ಅಂದರೆ ಕೆಲವೇ ಸೆಕೆಂಡುಗಳಲ್ಲಿ ಸಂಪೂರ್ಣ ಚಲನಚಿತ್ರ ಅಥವಾ ದೊಡ್ಡ ಡೇಟಾ ಫೈಲ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 6G ಎಂಬುದು 5Gಗಿಂತ ವೇಗ ಮತ್ತು ತಂತ್ರಜ್ಞಾನದ ಏಕೀಕರಣದಲ್ಲಿ ಗಮನಾರ್ಹ ಮುನ್ನಡೆಯಾಗಿದ್ದು, AI, ಉನ್ನತ ಫ್ರೀಕ್ವೆನ್ಸಿಗಳು, ಮತ್ತು ಗ್ಲೋಬಲ್ ಕವರೇಜ್ ಮೂಲಕ 2030ರ ದಶಕದಲ್ಲಿ ಡಿಜಿಟಲ್ ಅನುಭವಗಳನ್ನು ರೂಪಾಂತರಗೊಳಿಸಲಿದೆ.

6G ವಿಶೇಷತೆ ಏನು.?

ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

6G ಎಂಬುದು ಕೇವಲ ವೇಗದ ಜಾಲವಲ್ಲ, ಬದಲಿಗೆ AI, ಮತ್ತು ಗ್ಲೋಬಲ್ ಕನೆಕ್ಟಿವಿಟಿಯೊಂದಿಗೆ ಡಿಜಿಟಲ್ ರೂಪಾಂತರಕ್ಕೆ ದಾರಿ ಮಾಡಿಕೊಡುವ ತಂತ್ರಜ್ಞಾನವಾಗಿದೆ. 6G ಫೋನ್‌ಗಳು ಸುಧಾರಿತ ಚಿಪ್‌ಸೆಟ್‌ಗಳು, ಶಕ್ತಿಶಾಲಿ ಬ್ಯಾಟರಿಗಳು ಮತ್ತು ಅಲ್ಟ್ರಾ-ಫಾಸ್ಟ್ ನೆಟ್‌ವರ್ಕ್‌ಗಳನ್ನು ಬೆಂಬಲಿಸುವ ಮಾಡ್ಯೂಲ್‌ಗಳನ್ನು ಒಳಗೊಂಡಿರುತ್ತವೆ. ಸುಧಾರಿತ ಕ್ಯಾಮೆರಾಗಳು ಮತ್ತು ಹೊಸ ಪ್ರದರ್ಶನ ತಂತ್ರಜ್ಞಾನಗಳನ್ನು ಸಂಯೋಜಿಸಬಹುದು. ಈ ತಂತ್ರಜ್ಞಾನವು ಜನರ ಜೀವನ ವಿಧಾನವನ್ನು ಗಮನಾರ್ಹವಾಗಿ ಸುಧಾರಿಸಬಹುದು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net