Stock Market: ಟ್ರಂಪ್​ ಹೊಡೆತಕ್ಕೆ ಚೇತರಿಸಿಕೊಳ್ಳದ ಷೇರುಪೇಟೆ: ಸೆನ್ಸೆಕ್ಸ್ 50, ನಿಫ್ಟಿ 33 ಅಂಕ ಕುಸಿತ

Untitled design - 2025-09-23T165126.276
Published on

Stock Market: ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ವಾರದ 2ನೇ ದಿನವಾದ ಮಂಗಳವಾರ(ಸೆ.23) ಭಾರೀ ಕುಸಿತ ಕಂಡಿದೆ.

ನಿಫ್ಟಿ 50 ಸೂಚ್ಯಂಕವು 33 ಪಾಯಿಂಟ್‌ಗಳ ಕುಸಿತದೊಂದಿಗೆ 25,169 ಕ್ಕೆ ಕೊನೆಗೊಂಡಿತು. ಆದರೆ, ಅದರ ಬಿಎಸ್‌ಇ ಪ್ರತಿರೂಪ ಸೆನ್ಸೆಕ್ಸ್ 50 ಪಾಯಿಂಟ್‌ಗಳ ಕುಸಿತದೊಂದಿಗೆ 82,102 ಕ್ಕೆ ಸ್ಥಿರವಾಯಿತು. ಕಳೆದ ವಾರ ಏರಿಕೆಯಲ್ಲಿದ್ದ ಷೇರುಪೇಟೆ ಈ ಬಾರಿ ವಾರದ ಆರಂಭದಲ್ಲೇ H-1B ವೀಸಾ ಶುಲ್ಕ ಘೋಷಣೆ ಹಿನ್ನೆಲೆ ಹೊಡೆತ ಬಿದ್ದಿದೆ.

ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇಕಡಾ 0.29 ಮತ್ತು 0.35 ರಷ್ಟು ಕುಸಿದಿದ್ದರಿಂದ ಮಿಡ್ ಮತ್ತು ಸ್ಮಾಲ್-ಕ್ಯಾಪ್ ವಿಭಾಗಗಳು ಕಳಪೆ ಪ್ರದರ್ಶನ ನೀಡಿವೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಘೋಷಿಸಿದ H-1B ವೀಸಾ ಶುಲ್ಕ ಹೆಚ್ಚಳದ ಕಳವಳಗಳು ಮತ್ತು ಭಾರತ-ಯುಎಸ್ ವ್ಯಾಪಾರ ಮಾತುಕತೆಗಳ ಮೇಲಿನ ಅನಿಶ್ಚಿತತೆಯು ಭಾವನೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net