'ಹಿಂದುಗಳಾಗಿದ್ರೆ ಚರ್ಚ್​ಗೆ ಹೋಗಬೇಡಿ, ಕ್ರಿಸ್​ಮಸ್​ನಲ್ಲಿ ಪಾಲ್ಗೊಳ್ಳಬೇಡಿ': ಅಸ್ಸಾಂ ಬಜರಂಗ ದಳ ನಾಯಕನ ಹೇಳಿಕೆ

Hindus
Published on

ಗುವಾಹಟಿ: ಈಶಾನ್ಯ ರಾಜ್ಯಗಳಲ್ಲಿ ಮತಾಂತರದ ಪಿಡುಗು ಅವ್ಯಾಹತವಾಗಿದ್ದು, ಬದಲಾದ ರಾಜಕೀಯ ಸನ್ನಿವೇಶದ ಕಾರಣ ಬಲವಂತದ, ಆಮಿಷ ಮತಾಂತರಕ್ಕೆ ಅಡ್ಡಿ ಉಂಟಾಗಿದೆ. ಆದಾಗ್ಯೂ, ಇದುವರೆಗಿನ ವಾಡಿಕೆಯಂತೆ ಹಿಂದುಗಳನ್ನು ಕ್ರಿಸ್​ಮಸ್ ಆಚರಣೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹಿಂದು ಸಮುದಾಯದಿಂದಲೇ ವಿರೋಧ ವ್ಯಕ್ತವಾಗ ತೊಡಗಿದೆ.

ಅಸ್ಸಾಂನಲ್ಲಿ ಬಜರಂಗ ದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿಥು ನಾಥ್ ಹಿಂದುಗಳಿಗೆ ಎಚ್ಚರಿಕೆಯ ಮನವಿಯೊಂದನ್ನು ಮಾಡಿರುವುದೀಗ ರಾಷ್ಟ್ರಮಟ್ಟದ ಗಮನಸೆಳೆದಿದೆ. ಮಿಥು ನಾಥ್ ಅವರ ವಿಡಿಯೋ ವೈರಲ್ ಆಗಿದೆ. ಅದರಲ್ಲಿರುವ ಸಂದೇಶ ಹೀಗಿದೆ - ನೀವು ಹಿಂದುಗಳೇ ಆಗಿದ್ದರೆ ಕ್ರಿಸ್​ಮಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಬೇಡಿ. ಚರ್ಚ್​ಗಳಿಗೆ ಹೋಗಬೇಡಿ. ಒಂದೊಮ್ಮೆ ಹೋದರೆ ಮುಂದಾಗುವ ಪರಿಣಾಮಗಳನ್ನು ನೀವು ವೈಯಕ್ತಿವಾಗಿಯೆ ಎದುರಿಸಬೇಕಾಗುತ್ತದೆ. ನೆರವಿಗೆ ಹಿಂದು ಸಮುದಾಯದವರು ಸಿಗಲಾರರು.

ಮೇಘಾಲಯದ ಶಿಲ್ಲಾಂಗ್​ನಲ್ಲಿ ಕ್ರಿಶ್ಚಿಯನ್ ಪ್ರಾಬಲ್ಯದ ಪ್ರದೇಶದಲ್ಲಿದ್ದ ರಾಮಕೃಷ್ಣ ಮಠಕ್ಕೆ ಸೇರಿದ ವಿವೇಕಾನಂದ ಕೇಂದ್ರವನ್ನು ಅವರು ಮುಚ್ಚಿಸಿದ್ದಾರೆ. ಇದು ಸಹಿಷ್ಣುತೆಯ ಲಕ್ಷಣವಲ್ಲ. ಅವರಿಗೆ ಪರಧರ್ಮ ಸಹಿಷ್ಣುತೆ ಇಲ್ಲ ಎಂದಾದಲ್ಲಿ, ಅವರ ಧಾರ್ಮಿಕ ಆಚರಣೆಗಳಲ್ಲಿ ನಮ್ಮವರು ಪಾಲ್ಗೊಳ್ಳುವುದೂ ಸರಿಯಲ್ಲ. ನಮ್ಮ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಮುಚ್ಚಿಸುವವರ ಆಚರಣೆಗಳಲ್ಲಿ ನಮ್ಮವರು ಪಾಲ್ಗೊಳ್ಳಬಾರದು. ಪಾಲ್ಗೊಂಡವರು ಕಂಡರೆ ನಾಲ್ಕೇಟು ಬಿಗಿದರೂ ಅಡ್ಡಿ ಇಲ್ಲ. ಅಂಥವರನ್ನು ಖಂಡಿಸಬೇಕು ಎಂದು ಮಿಥು ನಾಥ್ ಕರೆ ಕೊಟ್ಟಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net