91,629 ಕೋಟಿ ರೂಪಾಯಿ ಮೌಲ್ಯ ಹೆಚ್ಚಿಸಿಕೊಂಡ ಮಿಡ್​ ಕ್ಯಾಪ್​ನ ಟಾಪ್ 6 ಕಂಪನಿಗಳು !

Stock-market investment
Published on

ನವದೆಹಲಿ: ಭಾರತೀಯ ಷೇರುಪೇಟೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಮಿಡ್ ಕ್ಯಾಪ್​ ನ ಟಾಪ್ 10 ಕಂಪನಿಗಳ ಪೈಕಿ ಆರು ಕಂಪನಿಗಳು 91,629 ಕೋಟಿ ರೂಪಾಯಿ ಮೌಲ್ಯ ವೃದ್ಧಿಸಿಕೊಂಡಿವೆ. ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕಂಪನಿಗಳ ಷೇರು ಗರಿಷ್ಠ ಏರಿಕೆ ದಾಖಲಿಸಿವೆ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಕಳೆದ ವಾರ 929.83 ಅಂಶ (2.10%) ಏರಿಕೆ ದಾಖಲಿಸಿದೆ. ಲಾಭಾಂಶ ದಾಖಲಿಸಿಕೊಂಡ ಕಂಪನಿಗಳ ಷೇರಿನ ಪಟ್ಟಿಯಲ್ಲಿ ರಿಯಲನ್ಸ್ ಇಂಡಸ್ಟ್ರೀಸ್ (ಆರ್​ಐಎಲ್​), ಟಿಸಿಎಸ್​, ಹಿಂದುಸ್ಥಾನ್ ಯೂನಿಲಿವರ್ ಲಿಮಿಟೆಡ್, ಇನ್​ಫೋಸಿಸ್​, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್​ಟೆಲ್​ ಷೇರುಗಳಿವೆ. ಇದೇ ವೇಳೆ ಎಚ್​ಡಿಎಫ್​ಸಿ ಬ್ಯಾಂಕ್​, ಎಚ್​ಡಿಎಫ್​ಸಿ, ಕೊಟಾಕ್ ಮಹೀಂದ್ರಾ ಬ್ಯಾಂಕ್​, ಬಜಾಜ್ ಫೈನಾನ್ಸ್​ ನಷ್ಟ ಅನುಭವಿಸಿವೆ.

ಲಾಭಾಂಶ ಗಿಟ್ಟಿಸಿಕೊಂಡ ಕಂಪನಿಗಳ ಪೈಕಿ ಗರಿಷ್ಠ ಲಾಭ ಪಡೆದ ಐಸಿಐಸಿಐ ಬ್ಯಾಂಕಿನ ಬಂಡವಾಳ 20,272.71 ಕೋಟಿ ರೂಪಾಯಿ ಹೆಚ್ಚಾಗಿದ್ದು, ಒಟ್ಟು ಕಂಪನಿ ಮೌಲ್ಯ 3,46,497.75 ಕೋಟಿ ರೂಪಾಯಿ ಆಗಿದೆ. ಟಿಸಿಎಸ್​ ಮಿಡ್​ ಕ್ಯಾಪ್​ 17,579,92 ಕೋಟಿ ರೂಪಾಯಿ ಹೆಚ್ಚಾಗಿದ್ದು ಒಟ್ಟು ಮೌಲ್ಯ 10,22,900.07 ಕೋಟಿ ರೂಪಾಯಿ ಆಗಿದೆ. ಇದರ ಬೆನ್ನಿಗೆ ಭಾರ್ತಿ ಏರ್​ಟೆಲ್ ಮೌಲ್ಯ 16,694.01 ಕೋಟಿ ರೂಪಾಯಿ ಏರಿಕೆ ಆಗಿದ್ದು 2,69,449.98 ಕೋಟಿ ರೂಪಾಯಿ ತಲುಪಿದೆ. ಇದೇ ವೇಳೆ ಆರ್​ಐಎಲ್​ ಮೌಲ್ಯ 10,586.86 ಕೋಟಿ ಹೆಚ್ಚಾಗಿ 12,34,003.83 ಕೋಟಿ ರೂಪಾಯಿ ಆಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net