

ಬೆಂಗಳೂರು: ರಾಜ್ಯಾದ್ಯಂತ ಶನಿವಾರ(ಆ.17) ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗದ(ಓಪಿಡಿ) ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕೊಲ್ಕತ್ತಾದ ಆರ್.ಜಿ.ಕಾರ್ ವೈದ್ಯಕಿಯ ಕಾಲೇಜಿನಲ್ಲಿ ಕರ್ತವ್ಯನಿರತ ವೈದ್ಯೆಯನ್ನು ಅತ್ಯಾಚಾರ ಎಸಗಿ ಅಮಾನುಷವಾಗಿ ಹತ್ಯೆಗೈದ ಟನೆ ಖಂಡಿಸಿ ಭಾರತೀಯ ವೈದ್ಯಕಿಯ ಸಂಘ(ಐಎಂಎ), ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಶಾಖೆ, ಶನಿವಾರ (ಆ.17) ಬೆಳಗ್ಗೆ 6 ಗಂಟೆಯಿಂದ ಭಾನುವಾರ(ಆ.18) ಬೆಳಗ್ಗೆ 6 ಗಂಟೆವರೆಗೆ ಖಾಸಗಿ ಆಸ್ಪತ್ರೆಗಳ ಓಪಿಡಿ ಸೇವೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದೆ.
ಕೆ.ಆರ್.ರಸ್ತೆಯ ಕೆಂಪೇಗೌಡ ಆಸ್ಪತ್ರೆಯಿಂದ ಭಾರತೀಯ ವೈದ್ಯಕಿಯ ಸಂದ ಕರ್ನಾಟಕ ರಾಜ್ಯ ಶಾಖೆ ಕಚೇರಿವರೆಗೆ ಬೃಹತ್ ಜಾಥಾ ನಡೆಯಲಿದೆ. ಸಾವಿರಾರು ವೈದ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್( ಫನಾ), ಫನಾ ಬೆಂಬಲ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಮಕ್ಕಳ ವೈದ್ಯರ ಸಂಘ, ಆಥೋರ್ಪಿಡಿಕ್ ಸಂಘ, ಮೆಡಿಕಲ್ ಕಾಲೇಜು ವೈದ್ಯರ ಸಂಘ,ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್( ಕೆಎಆರ್ಡಿ) ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಸಹ ನೈತಿಕ ಬೆಂಬಲ ವ್ಯಕ್ತಪಡಿಸಿವೆ.ವೈದ್ಯಕಿಯ ಕಾಲೇಜಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ವಿದ್ಯಾರ್ಥಿಗಳು ಪ್ರತಿಭಟನೆಗೆ ಧುಮಕಲಿದ್ದಾರೆ. ಹೀಗಾಗಿ, ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ ಉಳಿದ ಕಾಯಿಲೆಗಳಿಗೆ ಚಿಕಿತ್ಸೆ ದೊರೆಯುವುದಿಲ್ಲ.
ಒಂದೆರೆಡು ದಿನ ಮುಂದೂಡಿ:
ಶನಿವಾರ ಖಾಸಗಿ ವೈದ್ಯರು ಪ್ರತಿಭಟನೆ ಕೈಗೆತ್ತಿಗೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ರೋಗಿಗಳು ದೂರದ ಊರಿಂದ ಬೆಂಗಳೂರಿಗೆ ಬರುವುದನ್ನೂ ಸಾಧ್ಯವಾದಷ್ಟೂ ಒಂದೆರೆಡು ದಿನ ಮುಂದೂಡುವುದು ಒಳಿತು. ಒಂದು ವೇಳೆ ಬೆಂಗಳೂರಿಗೆ ಬಂದರೂ ರೋಗಿಗಳು ಚಿಕಿತ್ಸೆ ಸಿಗುವುದಿಲ್ಲ. ತುರ್ತು ಚಿಕಿತ್ಸೆ ಪಡೆಯುವವರು ವೈದ್ಯರ ಜತೆ ಸಂಪರ್ಕ ಇಟ್ಟಕೊಂಡು ಸಲಹೆ ಪಡೆಯಬೇಕು. ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಸೇವೆ ಲಭ್ಯವಿದ್ದರೂ ಬಹುತೇಕ ವೈದ್ಯರು, ವೈದ್ಯಕಿಯ ಸಿಬ್ಬಂದಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಹಾಗಾಗಿ, ವೈದ್ಯರು ಕೊರತೆ ಕಾಡಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಸೇರಿ ಎಲ್ಲ ಆರೋಗ್ಯ ಸೇವೆಗಳು ಲಭ್ಯವಿದೆ. ಹಾಗಾಗಿ, ಸರ್ಕಾರಿ ಆಸ್ಪತ್ರೆಗಳ ಸೇವೆಯನ್ನು ರೋಗಿಗಳು ಬಳಸಿಕೊಳ್ಳಬಹುದು.
ಏನೆಲ್ಲಾ ಸೇವೆ ಇರೋದಿಲ್ಲ?
* ಜ್ವರ, ಕೆಮ್ಮು,ನೆಗಡಿಗೆ ಚಿಕಿತ್ಸೆ ಸಿಗಲ್ಲ
* ಡಯಾಲಿಸಿಸಿ
* ಕ್ಲಿನಿಕ್ ಸೇವೆ
* ಮಕ್ಕಳ ಓಪಿಡಿ
* ದಂತ ಚಿಕಿತ್ಸೆ
* ಶಸ್ತ್ರಚಿಕಿತ್ಸೆ
ಏನೆಲ್ಲಾ ಸೇವೆ ಇರುತ್ತೆ?
*ತುರ್ತು ಸೇವೆ
* ಮೆಡಿಕಲ್ ಶಾಪ್ ಇರಲಿದೆ
* ಒಳರೋಗಿ ಸೇವೆ
* ಹೆರಿಗೆ, ತುರ್ತು ಶಸ್ತ್ರಚಿಕಿತ್ಸೆ
ರೋಗಿಗಳ ಆರೋಗ್ಯಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ವೈದ್ಯರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಕೊಲ್ಕತ್ತಾದಲ್ಲಿ ಯುವ ವೈದ್ಯೆ ಮೇಲೆ ಘೋರವಾಗಿ ಅತ್ಯಾಚಾರ ನಡೆಸಿ ಹಲ್ಲೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಸಂದಲ್ಲಿರುವ 1.36 ಲಕ್ಷ ವೈದ್ಯರು ಹೋರಾಟದಲ್ಲಿ ಭಾಗಿಯಾಗಬೇಕೆಂದು ಕೋರಿದ್ದೇವೆ. ದೇಶದಲ್ಲಿ ವೈದ್ಯರ ರಕ್ಷಣೆಗೆ ಯಾವುದೇ ಕಾನೂನು ಇಲ್ಲ. ಇದರಿಂದಾಗಿ ಅಸುರತ ವಾತಾವರಣದಲ್ಲಿ ಕರ್ತವ್ಯ ಮಾಡಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ. ಟನೆಯಿಂದ ಮಹಿಳಾ ವೈದ್ಯರು ಹೆಚ್ಚು ಭಯಬೀತರಾಗಿದ್ದಾರೆ. ಹಾಗಾಗಿ, ಇಂಥ ಟನೆ ನಡೆಯದಂತೆ ಕೇಂದ್ರ ಸರ್ಕಾರ,ವೈದ್ಯರ ಸುರಕ್ಷತೆಗೆ ತಕ್ಷಣ ಪ್ರತ್ಯೇಕ ಕಾನೂನು ಜಾರಿಗೆ ತರಬೇಕು.
| ಡಾ.ಎಸ್.ಶ್ರೀನಿವಾಸ್.ಅಧ್ಯಕ್ಷ ಭಾರತೀಯ ವೈದ್ಯಕಿಯ ಸಂಘ ಕರ್ನಾಟಕ ಶಾಖೆ.