ಸೂಕ್ತ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ : ಗೃಹ ಸಚಿವ Amit Sha

Amit Shah 16
Published on

Srinagar: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಸೂಕ್ತ ಸಮಯದಲ್ಲಿ ಪುನಃಸ್ಥಾಪಿಸುವುದಾಗಿ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶದ ಜನರ ಬೇಡಿಕೆಗಳಿಗೆ ಸರಿಯಾದ ರೀತಿಯ ಪರಿಹಾರ ನೀಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ (Amit Sha), ಶನಿವಾರ (ಅಕ್ಟೋಬರ್ 18) ಭರವಸೆ ನೀಡಿದರು.

ಬಿಹಾರದ ಪಾಟ್ನಾದಲ್ಲಿ ನಡೆದ ಮಾಧ್ಯಮ ಸಮಾವೇಶದಲ್ಲಿ ಮಾತನಾಡಿದ ಷಾ, 370 ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಒಂಬತ್ತು ತಿಂಗಳಲ್ಲಿ ಯಾವುದೇ ಸ್ಥಳೀಯ ಭಯೋತ್ಪಾದಕನನ್ನು ನೇಮಕ ಮಾಡಿಕೊಂಡಿಲ್ಲ ಎಂದು ಹೇಳಿದ್ದಾರೆ.

1990 ರಿಂದ ಪ್ರತ್ಯೇಕತಾವಾದ ಉಲ್ಬಣಿಸುತ್ತಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದು ಗುಣಾತ್ಮಕ ಬದಲಾವಣೆಯಾಗಿದ್ದು, ಇದಕ್ಕೂ ಮೊದಲು ಪಾಕಿಸ್ತಾನ ಗಡಿಯಾಚೆಯಿಂದ ಭಯೋತ್ಪಾದಕರನ್ನು ಕಳುಹಿಸುವ ಅಗತ್ಯವಿಲ್ಲ ಎಂದು ಭಾವಿಸಿತ್ತು. ಅವರು ನಮ್ಮ ರಾಜ್ಯದ ಮಕ್ಕಳ ಕೈಗೆ ಶಸ್ತ್ರಾಸ್ತ್ರಗಳನ್ನು ಇಡುತಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಜನರು ತಾವು ಇಡೀ ದೇಶಕ್ಕೆ ಸೇರಿದವರು ಮತ್ತು ಇಡೀ ದೇಶವು ತಮಗೆ ಸೇರಿದ್ದು ಎಂದು ಭಾವಿಸಿದ್ದಾರೆ ಎಂದರು. ಇಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಲಾಗಿದೆ. ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳು ನಡೆದಿವೆ, ಮತ್ತು ವಿಧಾನಸಭೆಗೆ ಚುನಾವಣೆಗಳು ನಡೆದಿವೆ. ರಾಜ್ಯಸಭಾ ಚುನಾವಣೆಗಳು ಸಹ ಕೆಲವು ದಿನಗಳಲ್ಲಿ ನಡೆಯಲಿವೆ ಎಂದು ಭರವಸೆ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಓಮರ್​ ಅಬ್ದುಲ್ಲಾ ರಾಜಕೀಯ ಒತ್ತಡಗಳಿಂದ ರಾಜ್ಯ ಸ್ಥಾನಮಾನದ ಬಗ್ಗೆ ಮಾತನಾಡುತಿದ್ದು, ಸೂಕ್ತ ಸಮಯದಲ್ಲಿ ರಾಜ್ಯತ್ವವನ್ನು ಪುನಃಸ್ಥಾಪಿಸಲಾಗುವುದು. ಈ ವಿಷಯವಾಗಿ ಅವರೊಂದಿಗೆ ಚರ್ಚಿಸಿದ ಬಳಿಕವೇ ಜಮ್ಮು ಕಾಶ್ಮೀರ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು, ಲಡಾಖ್‌ನಲ್ಲಿನ ಇತ್ತೀಚಿನ ಪ್ರತಿಭಟನೆಗಳ ಕುರಿತಾಗಿ ಕೇಂದ್ರ ಸರ್ಕಾರ ಲೇಹ್ ಮತ್ತು ಕಾರ್ಗಿಲ್ ಸಮಿತಿಗಳೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.

ನಾನು ಜನರ ಬೇಡಿಕೆಗಳ ಬಗ್ಗೆ ಮಾತನಾಡಬಲ್ಲೆ. ಯಾವುದೇ ವ್ಯಕ್ತಿಯ ಬಗ್ಗೆ ಅಲ್ಲ. ವಾಂಗ್‌ಚುಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಷಯವು ನ್ಯಾಯಾಲಯದ ಮುಂದಿದ್ದು, ಕಾನೂನಿನ ಪ್ರಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net