VIDEO: ಎಸ್ಸೆಸ್ಸೆಲ್ಸಿ, ಪಿಯುಸಿ ಟಾಪರ್​ ವಿದ್ಯಾರ್ಥಿಗಳಿಗೆ ಫ್ರೀ ಹೆಲಿಕಾಪ್ಟರ್​​ ರೈಡ್​​​..!

2323
Published on

ರಾಯ್​​ಪುರ್: ಮುಖ್ಯಮಂತ್ರಿ ಭೂಪೇಶ್​ ಬಘೇಲ್​ 10 ಮತ್ತು 12ನೇ ತರಗತಿಯಲ್ಲಿ ಒಳ್ಳೆಯ ಅಂಕ ಗಳಿಸಿದ ಟಾಪರ್​ ವಿದ್ಯಾರ್ಥಿಗಳಿಗೆ ಹೆಲಿಕಾಫ್ಟರ್​ ರೈಡ್​ ಕರೆದೊಯ್ಯುವ ಆಶ್ವಾಸನೆ ನೀಡಿದ್ದರು. ಇದೀಗ ಅವರು ನುಡಿದಂತೆ ನಡೆದಿದ್ದಾರೆ. ಟಾಪರ್​ ವಿದ್ಯಾರ್ಥಿಗಳು ಹೆಲಿಕಾಫ್ಟರ್​ ರೈಡಿಂಗ್ ಮಾಡಿ ಖುಷಿಯಾಗಿದ್ದಾರೆ.

ಛತ್ತೀಸ್​ಗಢ ಸರ್ಕಾರವು 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳನ್ನು ಅಧ್ಯಯನದ ಕಡೆಗೆ ಪ್ರೇರೇಪಿಸುವ ಸಲುವಾಗಿ ತರಗತಿಯ ಟಾಪರ್​ಗಳಿಗೆ ಹೆಲಿಕಾಫ್ಟರ್​ನಲ್ಲಿ ಪ್ರಯಾಣಿಸುವ ಅವಕಾಶ ನೀಡಿತ್ತು. ಅದರಂತೆ ಇಂದು ವಿದ್ಯಾರ್ಥಿಗಳನ್ನು ಸರ್ಕಾರದ ವತಿಯಿಂದ ಹೆಲಿಕಾಫ್ಟರ್​ನಲ್ಲಿ ಸುತ್ತಾಡಿಸಲಾಗಿದೆ.

ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮುಂದೆ ಬರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ತರಗತಿಯಲ್ಲಿ ಒಳ್ಳೆಯ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹೆಲಿಕಾಫ್ಟರ್​​ನಲ್ಲಿ ಪ್ರಯಾಣಿಸುವ ಅವಕಾಶ ನೀಡಲಾಗಿತ್ತು. ಎಂದು ಛತ್ತೀಸ್‌ಗಢ ಸಚಿವ ಪ್ರೇಮಸಾಯಿ ಸಿಂಗ್ ಟೆಕಮ್ ಹೇಳಿದ್ದಾರೆ.

ಹೆಲಿಕಾಫ್ಟರ್​ನಲ್ಲಿ ಪ್ರಯಾಣಿಸುವ ಅವಕಾಶ ಇದೆ ಎಂದಾಗ ಖುಷಿಯಾಗಿತ್ತು. ನಾವು ಮೊದಲ ಬಾರಿಗೆ ಹೆಲಿಕಾಫ್ಟರ್​​ನಲ್ಲಿ ಪ್ರಯಾಣಿಸಿದ್ದೇವೆ. ತರಗತಿಯಲ್ಲಿ ಒಳ್ಳೆಯ ಅಂಕ ಗಳಿಸಲು ಸರ್ಕಾರ ನೀಡಿದ ಪ್ರೋತ್ಸಾಹವೂ ಕಾರಣವಾಗಿದೆ. ನಮ್ಮ ಸಾಧನೆಯ ಬಗ್ಗೆ ಪೋಷಕರು ಸಂತಸಗೊಂಡಿದ್ದಾರೆ ಎಂದು ಹೆಲಿಕಾಫ್ಟರ್​ನಲ್ಲಿ ಪ್ರಯಾಣಿಸಿದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

ವಿಮಾನದಲ್ಲಿ ಪ್ರಯಾಣಿಸಬೇಕೆಂಬುದು ಪ್ರತಿಯೊಬ್ಬರ ಬಯಕೆ. ಆಕಾಶದಲ್ಲಿ ಹಾರಬೇಕೆಂಬ ಮಕ್ಕಳ ಬಯಕೆ ತಮ್ಮ ಸಾಧನೆಯ ಮೂಲಕ ನೆರವೇರಿದೆ. ಈ ಮೂಲಕ ಇನ್ನಷ್ಟು ಸಾಧನೆ ಮಾಡಬೇಕೆಂಬ ಧೃಢ ನಿರ್ಧಾರಕ್ಕೆ ಮಕ್ಕಳು ಬರುತ್ತಾರೆ ಎಂದು ಮುಖ್ಯಮಂತ್ರಿ ಭೂಪೇಶ್​ ಬಘೇಲ್ ಅಭಿಪ್ರಾಯ ಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net