ಕಂಠ ಪೂರ್ತಿ ಕುಡಿದ ಮತ್ತಿನಲ್ಲಿ ಮೊಸಳೆ ಹಿಡಿಯಲು ಕೆರೆಗೆ ಹಾರಿದ ಭೂಪ!

5426
Published on

ಬಾಗಲಕೋಟೆ: ಕುಡಿತದ ನಶೆ ಸಾಹಸ ಕೆಲಸ ಮಾಡಲು ಪ್ರೇರೇಪಿಸುತ್ತದಂತೆ! ಈ ಮಾತಿಗೆ ಸಾಕ್ಷಿಯೆಂಬಂತೆ ಕಠ ಪೂರ್ತಿ ಕುಡಿದ ಯುವಕನೊಬ್ಬ ಮೊಸಳೆ ಹಿಡಿಯಲು ಕೆರೆ ಹಾರಿದ್ದಾನೆ. ಕೊನೆಗೆ ಈಜು ಬಾರದೆ, ಈತನನ್ನು ಹಿಡಿತು ತರಲು ಇನಿಬ್ಬರು ಕೆರೆಗೆ ಜಿಗಿಯಬೇಕಾಗಿ ಬಂದಿದೆ.

ತಾಲೂಕಿನ ಮುನರ್ ವಸತಿ ಕೇಂದ್ರದ ಕೆರೆಯಲ್ಲಿ ಕಳೆದ ನಾಲ್ಕೈದು ದಿನದಿಂದ ಮೊಸಳೆ ವಾಸವಿದೆ. ಮೊಸಳೆ ನೋಡಲು ಜನರು ಮುಗಿಬಿದ್ದು ಬರುತ್ತಿದ್ದಾರೆ. ಈ ವೇಳೆ ಮೊಸಳೆ ನೋಡಲೆಂದು ಮೌಲಾಸಾಬ್​ ವಾಲೀಕಾರ ಎಂಬ ಯುವಕ ಬಂದಿದ್ದಾನೆ.

ಯುವಕನಿಗೆ ಮೊಸಳೆ ಹಿಡಿಯುವ ದುಸ್ಸಾಹಸಕ್ಕೆ ಮುಂದಾಗಿದ್ದಾನೆ. ಕುಡಿತದ ನಶೆಯಲ್ಲಿದ್ದಾಗಲೇ ನೇರವಾಗಿ ಕೆರೆಗೆ ಜಿಗಿದಿದ್ದಾನೆ. ನಶೆಯಲ್ಲಿ ತನಗೆ ಈಜು ಬರುವುದಿಲ್ಲ ಎಂಬುದನ್ನು ಅರಿಯದೆ ಮೊಸಳೆ ಹಿಡಿಯಲು ಕೆರೆಗೆ ಹಾರಿದ್ದಾನೆ. ಈ ವೇಳೆ ಈಜು ಬಾರದೆ ಮುಳುಗುತ್ತಿದ್ದ. ಕೊನೆಗೆ ಸ್ಥಳೀಯರು ಕೆರೆಗೆ ಹಾರಿ ಯುವಕನನ್ನು ರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net