

ಸುಳ್ಯ: ಐವರ್ನಾಡಿನಲ್ಲಿ ರಾಜಕೀಯ ಹಾಗೂ ಸಾಮಾಜಿಕ ಧುರೀಣ ಎಸ್.ಎನ್.ಮನ್ಮಥ ಅವರ ನೇತೃತ್ವದಲ್ಲಿ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ ಸದ್ಯದಲ್ಲೇ ನಡೆಯಲಿದ್ದು, ಪೂರ್ವಭಾವಿ ಸಭೆ ಐವರ್ನಾಡಿನಲ್ಲಿ ನಡೆಯಿತು.
ರಾಜ್ಯದಿಂದ 12 ಬಲಿಷ್ಠ ತಂಡಗಳನ್ನು ತರಲು ಮತ್ತು ಪಂದ್ಯಾವಳಿ ನಡೆಸುವ ಬಗ್ಗೆ ಸಮಾಲೋಚನೆ ನಡೆಸಿ ಸಮಿತಿ ರಚನೆ ಮಾಡಲಾಯಿತು. ಸಂಚಾಲಕರಾಗಿ ವಾಸುದೇವ ಬೊಳುಬೈಲು, ಅಧ್ಯಕ್ಷರಾಗಿ ಸಾತ್ವಿಕ್ ಕುದುಂಗು ಆಯ್ಕೆಯಾದರು.
ಹಿರಿಯ ಕಬಡ್ಡಿ ಆಟಗಾರ ಸಚಿನ್ ಪ್ರತಾಪ್ ಸ್ಪರ್ಧಾ ಆಯೋಜನೆಯ ಯಶಸ್ಸಿಗಾಗಿ ಕೆಲವೊಂದು ಸಲಹೆ, ಸೂಚನೆಗಳನ್ನು ನೀಡಿದರು. ಸ್ಥಳೀಯರಾದ ಸತೀಶ್ ಮಡ್ತಿಲ,ಮೋಹನ್ ಸುಂದರ್, ರಾಜೇಶ್ ನೆಕ್ರೆಪ್ಪಾಡಿ, ಸತೀಶ್ ಜಬಳೆ, ಜುನೈದ್ ನಿಡುಬೆ, ತೋಮಸ್ ಬಾಂಜಿಕೋಡಿ, ಬಾಲಕೃಷ್ಣ ಮಡ್ತಿಲ, ರಮೇಶ್ ಮಿತ್ತಮೂಲೆ, ಸುಂದರಲಿಂಗ, ರವಿರಾಜ್ ಪೂಜಾರಿಮನೆ, ಶರತ್ ಜಬಳೆ, ಸಚಿನ್ ಕೊಚ್ಚಿ, ಜೆ.ಟಿ.ವೆಂಕಪ್ಪ ಗೌಡ, ಸುನಿಲ್ ಕೋಂದ್ರಮಜಲು, ಬಾಲಕೃಷ್ಣ ಕೀಲಾಡಿ,ಯತೀಶ್, ರೋಹಿತ್ ಬಾಂಜಿಕೋಡಿ ಮೊದಲಾದವರು ಇದ್ದರು.