ಕಾಡಾನೆಗಳ ಹಾವಳಿ ತಡೆಗೆ ಶಾಶ್ವತ ಕ್ರಮ : ಮಾಜಿ ಶಾಸಕ ಮಠಂದೂರು ಆಗ್ರಹ

New Project (33)
Published on

ಪುತ್ತೂರು ಗ್ರಾಮಾಂತರ: ಗ್ರಾಮೀಣ ಭಾಗದ ಕೃಷಿ ಪ್ರದೇಶಗಳಿಗೆ ಕಾಡಾನೆಗಳು ನಿರಂತರವಾಗಿ ಲಗ್ಗೆಯಿಟ್ಟು ಕೃಷಿ ಹಾನಿ ಮಾಡುತ್ತಿದ್ದು, ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿನೀಡಿ ನಾಡಿನಿಂದ ಕಾಡಿನತ್ತ ಓಡಿಸುವ ಜತೆಗೆ ಕೃಷಿ ಹಾನಿಯಾದ ಕೃಷಿಕರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಕಾಡಾನೆಗಳು ಗ್ರಾಮೀಣ ಭಾಗಕ್ಕೆ ಮುಂದೆಂದೂ ಬಾರದ ರೀತಿಯಲ್ಲಿ ಸರ್ಕಾರ ಶಾಶ್ವತ ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದರು.

ಅರಿಯಡ್ಕ ಗ್ರಾ.ಪಂ. ವ್ಯಾಪ್ತಿಯ ಮಾಡ್ನೂರು ಗ್ರಾಮದ ವಿವಿಧ ಕಡೆಗಳಲ್ಲಿ ಕಾಡಾನೆಗಳ ಹಾವಳಿಯಿಂದಾಗಿ ಕೃಷಿ ನಾಶಗೊಂಡ ಕೃಷಿ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಮಾತನಾಡಿದರು.

ಅರಿಯಡ್ಕ ಗ್ರಾ.ಪಂ. ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯರಾದ ಲೋಕೇಶ್ ಚಾಕೋಟೆ, ಪ್ರವೀಣ್ ಅಮ್ಚಿನಡ್ಕ, ಮಾಜಿ ಸದಸ್ಯ ತಿಲಕ್ ರೈ ಕುತ್ಯಾಡಿ, ಸ್ಥಳೀಯರಾದ ಗಣೇಶ್ ಪೂವಂದೂರು, ಹಿರೇಬಂಡಾರಿ ಗ್ರಾಪಂ ಮಾಜಿ ಅಧ್ಯಕ್ಷ ಶೌಕತ್ ಆಲಿ ಮತ್ತಿತರರು ಜತೆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net