ಕಾಸರಗೋಡು: ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ಕೋಯಿಕ್ಕೋಡ್ ಪನ್ನಿಯಾಂಕರ ಕುಟ್ಟಿಮುಚ್ಚಿಕ್ಕಾಲ್ ನಿವಾಸಿ ಎನ್.ಪಿ ಅಸ್ಗರ್‌ಆಲಿ ಹಾಗೂ ಪನ್ನಿಯಾಂಕರ ಪಯನಾಕ್ಕಲ್ ನಿವಾಸಿ ಸಾದಿಕ್‌ಆಲಿ ಬಂಧಿತರು. ಇವರಿಂದ 4,82,514ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿಸಿಕೊಳ್ಳಲಾಗಿದೆ. ಮೊಗ್ರಾಲಿನಲ್ಲಿ ಪೊಲೀಸರ ತಂಡ ಕಾರ್ಯಚರಣೆ ನಡೆಸುವಾಗ ಆಗಮಿಸಿದ ಪಿಕ್‌ಅಪ್ ವಾಹನ ತಪಾಸಣೆ ನಡೆಸಿದಾಗ ಪತ್ತೆಯಾದ 3.12ಲಕ್ಷ ತಂಬಾಕು ಉತ್ಪನ್ನಗಳ ಪ್ಯಾಕೆಟ್ ವಶಪಡಿಸಿಕೊಂಡು ಸಾದಿಕ್‌ಆಲಿಯನ್ನು ಬಂಧಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಕುಂಬಳೆ ರಾಷ್ಟ್ರೀಯ ಹೆದ್ದಾರಿ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಪಿಕ್‌ಅಪ್ ವಾಹನದಲ್ಲಿ ಸಾಗಿಸುತ್ತಿದ್ದ 1.70 ಲಕ್ಷ ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿಸಿ ಸಾದಿಕ್‌ಅಲಿಯನ್ನು ಬಂಧಿಸಲಾಗಿದೆ. ಕರ್ನಾಟಕದಿಂದ ಕೋಯಿಕ್ಕೋಡಿಗೆ ತಂಬಾಕು ಉತ್ಪನ್ನ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡ ತಂಬಾಕು ಉತ್ಪನ್ನದ ಮೌಲ್ಯ 50 ಲಕ್ಷ ರೂ. ಅಂದಾಜಿಸಲಾಗಿದೆ.