ರಾಜ್ಯ ಹಣಕಾಸು ಆಯೋಗ ಪೂರ್ವಭಾವಿ ಸಭೆ

New Project (10)
Published on

ಕಾಸರಗೋಡು: ಏಳನೇ ರಾಜ್ಯ ಹಣಕಾಸು ಆಯೋಗದ ವರದಿ ಸಲ್ಲಿಸುವ ಪೂರ್ವಭಾವಿಯಾಗಿ ಸ್ಥಳೀಯಾಡಳಿತ ಪ್ರತಿನಿಧಿ, ಅಧಿಕಾರಿಗಳ ಪ್ರತಿಕ್ರಿಯೆ ಕ್ರೋಡೀಕರಿಸುವ ನಿಟ್ಟಿನಲ್ಲಿ ಹಣಕಾಸು ಆಯೋಗ ಅಧ್ಯಕ್ಷ ಡಾ.ಕೆ.ಎನ್.ಹರಿಲಾಲ್ ಜಿಲ್ಲೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಡಿಪಿಸಿ ಅಧ್ಯಕ್ಷೆ, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷ ಶಾನವಾಜ್ ಪಾದೂರು, ಡಿಪಿಸಿ ಸದಸ್ಯರಾದ ಎಸ್.ಎನ್.ಸರಿತಾ, ಕೆ.ಶಕುಂತಲಾ, ಜಾಸ್ಮಿನ್ ಕಬೀರ್, ಎಂ.ರೀಟಾ, ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ವಿ.ಸುಜಾತಾ, ಗ್ರಾಪಂ ಅಧ್ಯಕ್ಷರಾದ ಟಿ.ಕೆ.ರವಿ, ಎ.ಪಿ.ಉಷಾ, ಎಂ.ಕುಮಾರನ್, ಖಾದರ್ ಬದ್ರಿಯಾ, ವಿವಿ ಸಜೀವನ್, ಎಂ.ಧನ್ಯಾ, ಜೆ.ಎಸ್.ಸೋಮಶೇಖರ, ಜೀನ್ ಲೆವಿನೋ ಮೊಂತೆರೋ, ಜಿಲ್ಲಾ ಯೋಜನಾಧಿಕಾರಿ ಟಿ.ರಾಜೇಶ್, ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕ ಜಿ.ಸುಧಾಕರನ್, ಆಯೋಗ ಸದಸ್ಯ ಡಿ.ಅನಿಲ್ ಪ್ರಸಾದ್, ಹಣಕಾಸು ಆಯೋಗ ಸಲಹೆಗಾರ ಡಾ.ಕೆ.ಕೆ.ಹರಿಕೃಪ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net