ಉಳ್ಳಾಲ: 2000ನೇ ಇಸವಿಯಲ್ಲಿ 180 ಚದರ ಅಡಿಯ ಕೋಣೆಯಲ್ಲಿ ಆರಂಭಗೊಂಡ ಸಂಸ್ಥೆ ಮೂರು ವರ್ಷ ಬಳಿಕ ಸ್ವಂತ ಮಳಿಗೆ ಆರಂಭಿಸಿದ್ದು ಲಕ್ಷಾಂತರ ಗ್ರಾಹಕರ ಸಹಕಾರ ಕಾರಣ. ದೀಪಾವಳಿ ಹಬ್ಬ, ಬಳಿಕ ಅಮ್ಮ ವೈಭವ್, ಅಮ್ಮ ಉತ್ಸವ್ ನಡೆಸುತ್ತಾ ಬರಲಾಗಿದೆ. ವರ್ಷವಿಡೀ ಗ್ರಾಹಕರಿಗೆ ಉಡುಗೊರೆ ನೀಡಲಾಗುತ್ತಿದೆ ಎಂದು ಅಮ್ಮ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಮಾಲೀಕ ಯೋಗೀಶ್ ವಿ.ಸಾಲ್ಯಾನ್ ಹೇಳಿದರು.
ತೊಕ್ಕೊಟ್ಟು ಅಮ್ಮ ಇಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚರ್ ಶೋರೂಂನಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಸಂಭ್ರಮಗಳ ಸಂಭ್ರಮ, ಅದ್ದೂರಿ ಅದೃಷ್ಟ’ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆ ಗುಣಮಟ್ಟದ ವಸ್ತುಗಳಿಂದಾಗಿ ಇಂದಿಗೂ ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಬಂದಿದೆ. ಪ್ರತಿವರ್ಷ ‘ಸಂಭ್ರಮಗಳ ಸಂಭ್ರಮ, ಅದ್ದೂರಿ ಅದೃಷ್ಟ’ ಲಕ್ಕಿ ಡ್ರಾ ಮೂಲಕ ಗ್ರಾಹಕರು ಖರೀದಿಸಿದ ವಸ್ತುಗಳಿಗೆ ಮೌಲ್ಯಯುತ ಬಹುಮಾನ ನೀಡುವ ಮೂಲಕ ಗ್ರಾಹಕರ ತೃಪ್ತಿಗೆ ಪಾತ್ರವಾಗಿದೆ ಎಂದರು.
ಉದ್ಯಮಿಗಳಾದ ಶಿವಪ್ರಸಾದ್ ಶೆಟ್ಟಿ, ಪವಿತ್ರಾ ಕುಮಾರ್ ಗಟ್ಟಿ, ಡಯಾನ ಸಿಲ್ವೆಸ್ಟರ್, ಇಸ್ಮಾಯಿಲ್, ರಶೀದ್ ಉಪಸ್ಥಿತರಿದ್ದರು. ಪೂರ್ಣಿಮಾ ಮೆಂಡನ್ ವಂದಿಸಿದರು. ಅಮಿತಾ ಕಾರ್ಯಕ್ರಮ ನಿರೂಪಿಸಿದರು.
ಅದ್ದೂರಿಯ ಅದೃಷ್ಟಶಾಲಿಗಳು
ಪ್ರಥಮ ಬಹುಮಾನ ಡಬಲ್ ಡೋರ್ ರೆಫ್ರಿಜರೇಟರ್– ಶ್ರುತಿ ಉಚ್ಚಿಲ, ದ್ವಿತೀಯ ಬಹುಮಾನ ವಾಷಿಂಗ್ ಮಿಷನ್– ಅನ್ವರ್ ಹುಸೈನ್ ಕಿನ್ಯ, ತೃತೀಯ ಬಹುಮಾನ ಕಾಟ್– ಶೈಲಜಾ ಪಿಲಾರ್, ಚತುರ್ಥ ಬಹುಮಾನ ಡ್ರೆಸ್ಸಿಂಗ್ ಟೇಬಲ್– ಮಾಧವ ಉಳ್ಳಾಲ್ ಸೋಮೇಶ್ವರ, ಪಂಚಮ ಬಹುಮಾನ ಟಿಲ್ಟಿಂಗ್ ಗ್ರೈಂಡರ್– ಜನಾರ್ದನ ಸೋಮೇಶ್ವರ ಪಾಲಾಗಿದೆ.