ಬ್ರಹ್ಮಕಲಶಾಭಿಷೇಕ ಆಮಂತ್ರಣ ಪತ್ರಿಕೆ ಬಿಡುಗಡೆ

Kin_Attur
Published on

ಕಿನ್ನಿಗೋಳಿ: ಶ್ರೀ ಕೊರ್ದಬ್ಬು ದೈವಸ್ಥಾನ ಅತ್ತೂರು ಕಾಪಿಕಾಡ್‌ನಲ್ಲಿ ಜ.24ರಿಂದ 30ರವರೆಗೆ ನೂತನ ರಾಜಗೋಪುರ ಉದ್ಘಾಟನೆ, ಶ್ರೀ ನಾಗದೇವರ ಗುಡಿ ಪ್ರತಿಷ್ಠಾಪನೆ, ಬ್ರಹ್ಮಕಲಶಾಭಿಷೇಕ, ವಾರ್ಷಿಕ ನೇಮೋತ್ಸವ ಕಾರ್ಯಕ್ರಮ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಿಶ್ವೇಶ್ವರ ಭಟ್ ಮುಂದಾಳತ್ವದಲ್ಲಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಧರ್ಮದರ್ಶಿ ಶೀನಸ್ವಾಮಿ ಹೇಳಿದರು.

ಪಕ್ಷಿಕೆರೆ ಶ್ರೀ ಕೊರ್ದಬ್ಬು ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ವಾತನಾಡಿದರು.

ಹಲವು ವರ್ಷಗಳಿಂದ ದೈವಸ್ಥಾನದಲ್ಲಿ ನಿರಂತರ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಬ್ರಹ್ಮಕಲಶಾಭಿಷೇಕದ ಅಂಗವಾಗಿ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಶ್ರೀ ಕೋರ್ದಬ್ಬು ದೈವಸ್ಥಾನದ ಕ್ಷೇತ್ರ ಪರಿಚಯ ಪುಸ್ತಕ ಬಿಡುಗಡೆ ಹಾಗೂ ಭಕ್ತಿ ಆಧಾರಿತ ಧ್ವನಿ ಸುರುಳಿ ಬಿಡುಗಡೆ ನಡೆಯಲಿದೆ ಎಂದರು.

ಆಡಳಿತ ಸಮಿತಿ ಅಧ್ಯಕ್ಷ ಪ್ರಭಾಕರ ಎಸ್.ಕೋಟ್ಯಾನ್, ಗುರಿಕಾರ ಗಂಗಾಧರ, ಸುರಗಿರಿ ಯುವಕ ಮಂಡಲ ಅಧ್ಯಕ್ಷ ಅಶ್ವಿನ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net