ಟೆಸ್ಟ್​ ವಿಶ್ವಕಪ್ ಫೈನಲ್​ ಪಂದ್ಯ ಕನ್ನಡ ಕಾಮೆಂಟರಿಯಲ್ಲೂ ನೇರಪ್ರಸಾರ

wtc final kannada web
Published on

ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಪ್ರತಿಷ್ಠಿತ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯವನ್ನು ಒಟ್ಟು 7 ಚಾನಲ್​ಗಳಲ್ಲಿ ನೇರಪ್ರಸಾರ ಮಾಡಲು ಸ್ಟಾರ್​ ಸ್ಪೋರ್ಟ್ಸ್​ ಚಾನಲ್​ ನಿರ್ಧರಿಸಿದೆ. ಕನ್ನಡ ಸಹಿತ ಕೆಲವು ಪ್ರಾದೇಶಿಕ ಭಾಷೆಗಳಲ್ಲೂ ಪಂದ್ಯದ ವೀಕ್ಷಕ ವಿವರಣೆ ಮತ್ತು ನೇರಪ್ರಸಾರ ಇರಲಿದೆ.

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯ ಭಾರತದಲ್ಲಿ ಒಟ್ಟು 5 ಭಾಷೆಗಳಲ್ಲಿ ನೇರಪ್ರಸಾರ ಕಾಣಲಿದೆ. ಇಂಗ್ಲಿಷ್​, ಹಿಂದಿ ಜತೆಗೆ ಕನ್ನಡ, ತೆಲುಗು ಮತ್ತು ತಮಿಳು ಕಾಮೆಂಟರಿಯಲ್ಲೂ ಪಂದ್ಯ ನೇರಪ್ರಸಾರ ಕಾಣಲಿದೆ.

ಇಂಗ್ಲೆಂಡ್​ನ ಸೌಥಾಂಪ್ಟನ್​ನಲ್ಲಿ ಜೂನ್​ 18ರಿಂದ 22ರವರೆಗೆ ನಡೆಯಲಿರುವ ಪಂದ್ಯ ಭಾರತದಲ್ಲಿ ಸ್ಟಾರ್​ ಸ್ಪೋರ್ಟ್ಸ್​1 ಚಾನಲ್​ನಲ್ಲಿ ಪ್ರಮುಖವಾಗಿ ಪ್ರಸಾರವಾಗಲಿದೆ. ಇದಲ್ಲದೆ ಸ್ಟಾರ್​ ಸ್ಪೋರ್ಟ್ಸ್​ ಕನ್ನಡ, ತಮಿಳು, ತೆಲುಗು ಚಾನಲ್​ನಲ್ಲೂ ನೇರಪ್ರಸಾರವಾಗಲಿದೆ. ಇದಲ್ಲದೆ ಡಿಸ್ನಿ+ ಹಾಟ್​ಸ್ಟಾರ್​ನಲ್ಲೂ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net