18ನೇ ಆವೃತ್ತಿಗೂ ಮುನ್ನವೇ LSGಗೆ ಆಘಾತ! ತಂಡದಿಂದ ಸ್ಟಾರ್​ ಆಟಗಾರ ಹೊರಗೆ​, ಪಂತ್ ಪಡೆಗೆ ಸಂಕಷ್ಟ? | IPL 2025

ವಿಜಯವಾಣಿ - 2025-03-11T132551.163
Published on

IPL 2025: ಇತ್ತೀಚೆಗಷ್ಟೇ ಟೀಮ್ ಇಂಡಿಯಾ ಗೆಲುವಿನ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ದುಬೈನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ರೋಹಿತ್ ಶರ್ಮ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ನಂತರ ಕ್ರಿಕೆಟ್ ಅಭಿಮಾನಿಗಳ ಚಿತ್ತ ಸದ್ಯ ಐಪಿಎಲ್​ನತ್ತ ಮುಖಮಾಡಿದೆ. ಇದೇ ಮಾರ್ಚ್ 22ರಿಂದ ಆರಂಭವಾಗಲಿರುವ ಐಪಿಎಲ್​ 18ನೇ ಆವೃತ್ತಿಗೆ ದಿನಗಣನೆ ಶುರುವಾಗಿದೆ. 10 ಬಲಿಷ್ಠ ತಂಡಗಳು ಮೈದಾನದಲ್ಲಿ ಭಾರೀ ಕಸರತ್ತು ನಡೆಸುತ್ತಿದ್ದು, 2025ರ ಐಪಿಎಲ್​ ಪ್ರಶಸ್ತಿಯನ್ನು ಗೆಲ್ಲಲು ಎದುರುನೋಡುತ್ತಿವೆ. ಮೇ 25 ರವರೆಗೆ ನಡೆಯಲಿರುವ ಈ ಮೆಗಾ ಈವೆಂಟ್​ ಆರಂಭಕ್ಕೂ ಮುನ್ನವೇ ಕ್ಯಾಪ್ಟನ್​ ರಿಷಭ್ ಪಂತ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್​ಗೆ ದೊಡ್ಡ ಹಿನ್ನಡೆ ಎದುರಾಗಿದೆ.

ಗಂಟೆಗೆ 156. 7 ಕಿಮಿ ವೇಗದಲ್ಲಿ ಎಲ್​ಎಸ್​ಜಿ ಪರ ಬೌಲಿಂಗ್ ಮಾಡುವ ಸ್ಟಾರ್ ಹಾಗೂ ಯುವ ವೇಗಿ ಮಯಾಂಕ್ ಯಾದವ್, ಐಪಿಎಲ್ 18ನೇ ಆವೃತ್ತಿಯ ಮೊದಲಾರ್ಧದಿಂದ ಹೊರಗುಳಿದಿದ್ದಾರೆ ಎಂದು ವರದಿಗಳು ಸ್ಪಷ್ಟಪಡಿಸಿವೆ. ಈ ಹಿಂದೆ ಬೆನ್ನು ನೋವಿನಿಂದ ಬಳಲುತ್ತಿದ್ದ ಮಯಾಂಕ್​, ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂಬ ಕಾರಣದಿಂದ ಅವರನ್ನು ಆವೃತ್ತಿಯ ಮೊದಲಾರ್ಧದಿಂದ ಕೈಬಿಡಲು ತಂಡ ನಿರ್ಧರಿಸಿದೆ. ಇಂಜುರಿಯಿಂದ ಬಳಲುತ್ತಿರುವ ಯಾದವ್​ರನ್ನು ಮೈದಾನಕ್ಕಿಳಿಸಲು ಸಾಧ್ಯವಾಗದ ಹಿನ್ನೆಲೆ ಫ್ರಾಂಚೈಸಿ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿದೆ.

ಪ್ರಸ್ತುತ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್​ನಲ್ಲಿ ಮಯಾಂಕ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಐಪಿಎಲ್​ಗೆ ಮರಳಲು ಅಭ್ಯಾಸವನ್ನು ಪ್ರಾರಂಭಿಸಿರುವ ಮಯಾಂಕ್​, ಫಿಟ್​ ಆಗಿ ಕಣಕ್ಕಿಳಿಯಲು ಯೋಚಿಸುತ್ತಿದ್ದಾರೆ. ಆವೃತ್ತಿಯ ಮೊದಲಾರ್ಧದೊಳಗೆ ಮಯಾಂಕ್​ ಚೇತರಿಸಿಕೊಂಡರೆ, ದ್ವಿತೀಯಾರ್ಧಕ್ಕೆ ಅವರು ಲಭ್ಯವಿರುತ್ತಾರೆ ಎಂದು ಎನ್​ಸಿಎ (NCA) ಮೂಲಗಳು ತಿಳಿಸಿವೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ

ರಿಷಭ್ ಪಂತ್ (ನಾಯಕ), ನಿಕೋಲಸ್ ಪೂರನ್, ಡೇವಿಡ್ ಮಿಲ್ಲರ್, ಏಡೆನ್ ಮಾರ್ಕ್ರಂ, ಹಿಮ್ಮತ್ ಸಿಂಗ್, ಆಯುಷ್ ಬಡೋನಿ, ಮ್ಯಾಥ್ಯೂ ಬ್ರೆಟ್ಜ್ಕಿ, ಆರ್ಯನ್ ಜ್ಯುವೆಲ್, ಮಿಚೆಲ್ ಮಾರ್ಷ್, ಶಹಬಾಜ್ ಅಹ್ಮದ್, ಯುವರಾಜ್ ಚೌಧರಿ, ಅಬ್ದುಲ್ ಸಮದ್, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಖಾನ್, ರಾಜವರ್ಧನ್ ಹಂಗರ್ಗೇಕರ್, ಅರ್ಶಿನ್ ಖಾನ್, ರಾಜಕುಮಾರ್, ದೇವೇಶ್ ಕುಲಕರ್ಣಿ ಶಮರ್ ಜೋಸೆಫ್, ಆಕಾಶ್ ಸಿಂಗ್, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ಸಿಂಗ್, ರವಿ ಬಿಷ್ಣೋಯಿ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net