ಶಿವದೇಗುಲದಲ್ಲಿ ಉದಯನಿಧಿ ಸ್ಟಾಲಿನ್ ಸಹೋದರಿ ಪೂಜೆ!

seethamarai
ಸೀತಾಮರೈ ಸ್ಟಾಲಿನ್​
Published on

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಎಂ.ಕೆ.ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ್ದ ಹೇಳಿಕೆಯ ವಿವಾದ ತಣ್ಣಗಾಗುವ ಮುನ್ನ ಸ್ಟಾಲಿನ್ ಪುತ್ರಿ ಸೀತಾಮರೈ ಸ್ಟಾಲಿನ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ.

ಮೈಲಾಡುತುರೈ ಜಿಲ್ಲೆಯ ಸಿರ್ಕಾಜಿ ಗ್ರಾಮದ ಸತ್ತೇನಾಥರ್ ದೇವಸ್ಥಾನದಲ್ಲಿ ಸೀತಾಮರೈ ಭಾನುವಾರ ವಿಶೇಷ ಪೂಜೆ ಸಲ್ಲಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಸಹ ಪ್ರತಿಕ್ರಿಯಿಸುತ್ತಿದ್ದಾರೆ. ಏನಂತೀರಿ ಮಿಸ್ಟರ್ ಸ್ಟಾಲಿನ್? ಏನಂತೀರಿ ಉದಯನಿಧಿಯರವೇ? ಇದು ಸನಾತನ ಧರ್ಮವಲ್ಲವೇ? ಎಂದು ಟ್ರೋಲ್‌ ಮಾಡಿ ಪ್ರಶ್ನಿಸುತ್ತಿದ್ದಾರೆ.

ಸೀತಾಮರೈ ಸ್ಟಾಲಿನ್ ರನ್ನು ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿತು. ಸ್ವಾಮಿ ಅಂಬಲ್ ಚಟ್ಟನಾಥರ್ ಮತ್ತು ಅಷ್ಟ ಭೈರವ ದೇವರಿಗೆ ಪೂಜೆ ಸಲ್ಲಿಸಿದರು. ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದರೆ ಪರಮೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಉದಯನಿಧಿ ಸಹೋದರಿ ಇಲ್ಲಿ ಪೂಜೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net