VIDEO | ಗೋಲ್ಡನ್ ಟೆಂಪಲ್​ಗೆ ರಾಹುಲ್​ ಗಾಂಧಿ ಭೇಟಿ; ತರಕಾರಿ ಕತ್ತರಿಸಿ, ಪೂಜೆ ಸಲ್ಲಿಸಿದ ಕಾಂಗ್ರೆಸ್​ ನಾಯಕ

Untitled design - 2023-10-03T164523.937
Published on

ಅಮೃತಸರ್​: ಪಂಜಾಬ್​ನ ಅಮೃತಸರದಲ್ಲಿರುವ ಗೋಲ್ಡನ್​ ಟೆಂಪಲ್​ಗೆ ಸೇವೆಯ ಉದ್ದೇಶದಿಂದ ಭೇಟಿ ಕೊಟ್ಟ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಇತರರೊಡನೆ ಸೇರಿ ತರಕಾರಿ ಕತ್ತರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಒಂದು ದಿನದ ಮಟ್ಟಿಗೆ ಅಮೃತಸರಕ್ಕೆ ಆಗಮಿಸಿರುವ ರಾಹುಲ್​, ವೈಯಕ್ತಿಕ ಹಾಗೂ ಆಧ್ಯಾತ್ಮಿಕ ಕಾರಣಗಳಿಂದ ಭೇಟಿ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಗುರ್ಬಾನಿ ಕೀರ್ತನೆಯನ್ನು ಕೇಳಿದ ನಂತರ ಸ್ಥಳೀಯರೊಡನೆ ದೇವಸ್ಥಾನದ ಕೆಲಸಗಳನ್ನು ಮಾಡಿದ್ದಾರೆ.

ಗಮನಾರ್ಹವಾಗಿ ದೇವಾಲಯದ ಆವರಣದಲ್ಲಿ ಸೇವೆಯ ಭಾಗವಾಗಿ ತರಕಾರಿಗಳನ್ನು ಕತ್ತರಿಸಿದರು. ಹೆಚ್ಚಿನ ಸಮಯದವರೆಗೂ ನೀರು ಹಂಚಿದ ರಾಹುಲ್​, ಪಾತ್ರೆಗಳನ್ನು ತೊಳೆದು ಇತರೆ ಕೆಲಸಗಳನ್ನು ಮಾಡುವ ಮುಖೇನ ದೇವಾಯಲಯದ ಕಾರ್ಯಗಳನ್ನು ಮಾಡಿದ್ದಾರೆ.(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net