

Staircase: ಗಾಜಿಯಾಬಾದ್ನ ವಸುಂಧರದಲ್ಲಿನ ವಸತಿ ಸೊಸೈಟಿಯಲ್ಲಿ ಮೆಟ್ಟಿಲುಗಳು ಕುಸಿದ ಪರಿಣಾಮ, ಸುಮಾರು ಎಂಟು ಕುಟುಂಬಗಳು 10 ಗಂಟೆಗಳ ಕಾಲ ತಮ್ಮ ಫ್ಲಾಟ್ ಒಳಗೆ ಸಿಲುಕಿಕೊಂಡಿದ್ದವು ಎನ್ನಲಾಗಿದೆ. ವಸುಂಧರ ಸೆಕ್ಟರ್ -17 ರ ಗ್ರೀನ್ ವ್ಯೂ ಅಪಾರ್ಟ್ಮೆಂಟ್ನಲ್ಲಿ ಇಂದು (ಆ.03) ಈ ಘಟನೆ ಸಂಭವಿಸಿದೆ.
ಕಟ್ಟಡದ ಮುಖ್ಯ ಮೆಟ್ಟಿಲು ಇದ್ದಕ್ಕಿದ್ದಂತೆ ಕುಸಿದು ಬಿದ್ದು, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಎಂಟು ಕುಟುಂಬಗಳು ಮೇಲಿನ ಮಹಡಿಗಳಲ್ಲಿ ಸಿಲುಕಿಕೊಂಡಿದ್ದವು. ಕೆಳಗಿನ ಮಹಡಿಯಿಂದ ಮೇಲಿನ ಮಹಡಿಗೆ ಹೋಗುವ ಮಾರ್ಗವು ಅವಶೇಷಗಳ ಕಾರಣದಿಂದಾಗಿ ಸಂಪೂರ್ಣವಾಗಿ ಮುಚ್ಚಿಹೋಗಿತ್ತು. ಅವಘಡ ಸಂಭವಿಸಿದ ವಸತಿ ಸಮುಚ್ಚಯದಲ್ಲಿ ನಾಲ್ಕು ಅಂತಸ್ತು ಹೊಂದಿದ್ದು ಇದಕ್ಕೆ ಮೆಟ್ಟಿಲು ಬಿಟ್ಟರೆ ಲಿಫ್ಟ್ ವ್ಯವಸ್ಥೆ ಇರಲ್ಲಿಲ್ಲ ಎಂದು ಹೇಳಲಾಗಿದೆ. ಮನೆಯ ಬಾಗಿಲ ಬಳಿಯೇ ಮೆಟ್ಟಿಲು ಇದ್ದುದರಿಂದ ಆ ಭಾಗವೇ ಕುಸಿದು ಬಿದ್ದು ನಿವಾಸಿಗಳಿಗೆ ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಈ ಘಟನೆಯಿಂದ ಅಲ್ಲಿನ ಕುಟುಂಬಗಳಿಗೆ ಯಾವುದೇ ಅಪಘಾತ ಸಂಭವಿಸಿಲ್ಲ ಎಂದು ಹೇಳಲಾಗಿದೆ. ಇನ್ನೂ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಅಪಾರ್ಟ್ಮೆಂಟ್ನಲ್ಲಿ ಸಿಲುಕಿದ್ದ ನಿವಾಸಿಗಳನ್ನು ರಕ್ಷಣೆ ಮಾಡಿದ್ದಾರೆ.
(ಏಜೇನ್ಸೀಸ್)
ಮೆಟ್ಟಿಲುಗಳು ಒಂದು ತುದಿಯಿಂದ ಕುಸಿದು ಅಪಾಯಕಾರಿಯಾಗಿ ನೇತಾಡುತ್ತಿದ್ದರೆ ಅದರ ಕೆಳ ಭಾಗದಲ್ಲೇ ಅಗ್ನಿಶಾಮಕ ಸಿಬ್ಬಂದಿ ಏಣಿ ಇಟ್ಟು ರಕ್ಷಣಾ ಕಾರ್ಯ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಆದರೂ ಅದನ್ನೆಲ್ಲ ಲೆಕ್ಕಿಸದೆ ಮನೆಯೊಳಗೆ ಸಿಲುಕಿದ್ದ ನಿವಾಸಿಗಳನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ವಸತಿ ಸಂಕೀರ್ಣವನ್ನು ಉತ್ತರ ಪ್ರದೇಶ ಸರ್ಕಾರದ ಆವಾಸ್ ವಿಕಾಸ್ ಯೋಜನೆಯಡಿಯಲ್ಲಿ ಎರಡು ದಶಕಗಳ ಹಿಂದೆ ನಿರ್ಮಿಸಲಾಗಿದ್ದು, ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಬಳಸಿ ನಿರ್ಮಾಣ ಮಾಡಲಾಗಿದೆ ವಸತಿ ಸಮುಚ್ಛಯದಲ್ಲಿರುವ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ.