ಎಸ್ಸೆಸ್ಸೆಲ್ಸಿ ಫಲಿತಾಂಶ-ಸ್ಥಾನ ಉತ್ತಮಪಡಿಸಿಕೊಂಡ ಶಿರಸಿ, ಕಾರವಾರ ಶೈಕ್ಷಣಿಕ ಜಿಲ್ಲೆಗಳು

SSLC-Result-
Published on

ಕಾರವಾರ/ಶಿರಸಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಎರಡೂ ಶೈಕ್ಷಣಿಕ ಜಿಲ್ಲೆಗಳು ತಮ್ಮ ಸ್ಥಾನ ಉತ್ತಮಪಡಿಸಿಕೊಂಡಿವೆ. ಕಳೆದ ವರ್ಷ 12 ನೇ ಸ್ಥಾನದಲ್ಲಿದ್ದ ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯು ಈ ಬಾರಿ ಶೇ.85.54 ರಷ್ಟು ಫಲಿತಾಂಶ ಪಡೆದು, ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದೆ. ಪರೀಕ್ಷೆ ಬರೆದ 9842 ವಿದ್ಯಾರ್ಥಿಗಳಲ್ಲಿ 8517 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿ 23 ನೇ ಸ್ಥಾನದಲ್ಲಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆ ಈ ಬಾರಿ ಶೇ.84.64 ರಷ್ಟು ಫಲಿತಾಂಶ ಪಡೆದ ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದೆ. ಪರೀಕ್ಷೆ ಬರೆದ 10046 ವಿದ್ಯಾರ್ಥಿಗಳಲ್ಲಿ 8503 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಾರವಾರ ಶೈಕ್ಷಣಿಕ ಜಿಲ್ಲೆಯ 200 ರಲ್ಲಿ , 29 ಅನುದಾನ ರಹಿತ, 21 ಸರ್ಕಾರಿ ಹಾಗೂ 7 ಅನುದಾನಿತ ಪ್ರೌಢಶಾಲೆಗಳು ಸೇರಿ 57 ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಜಿಲ್ಲೆಯ 14 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ಪಟ್ಟಿಯಲ್ಲಿದ್ದಾರೆ. ಶೇ.94.48 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದರೆ, ಶೇ. 85.99 ರಷ್ಟು ಮಾತ್ರ ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ. ನಗರ ಭಾಗದ ಶಾಲೆಗಳು ಶೇ.91.52 ರಷ್ಟು ಫಲಿತಾಂಶ ಪಡೆದಿದ್ದರೆ, ಗ್ರಾಮೀಣ ಭಾಗದ ಶಾಲೆಗಳು ಶೇ. 89.63 ರಷ್ಟು ಫಲಿತಾಂಶ ಪಡೆದಿವೆ. ಖಾಸಗಿ ಶಾಲೆಗಳ ಶೇ.96.09 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಸರ್ಕಾರಿ ಶಾಲೆಗಳ ಫಲಿತಾಂಶ ಶೇ. 93.58 ಆಗಿದ್ದರೆ, ಅನುದಾನಿತ ಶಾಲೆಗಳ ಶೇ.84.85 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಥಮ ಭಾಷೆಯಲ್ಲಿ 107 ವಿದ್ಯಾರ್ಥಿಗಳು ಪೂರ್ಣಾಂಕ, ದ್ವಿತೀಯ ಭಾಷೆಯಲ್ಲಿ 156, ತೃತೀಯ ಭಾಷೆಯಲ್ಲಿ 267, ಗಣಿತದಲ್ಲಿ 13, ವಿಜ್ಞಾನದಲ್ಲಿ 10, ಸಮಾಜ ವಿಜ್ಞಾನದಲ್ಲಿ 29 ವಿದ್ಯಾರ್ಥಿಗಳು ಪೂರ್ಣಾಂಕ ಪಡೆದಿದ್ದಾರೆ.
ಶಿರಸಿ ಶೈಕ್ಷಣಿಕ ಜಿಲ್ಲೆಯ 184 ಪ್ರೌಢಶಾಲೆಗಳ ಪೈಕಿ, 25 ಸರ್ಕಾರಿ, 15 ಅನುದಾನಿತ ಹಾಗೂ 14 ಅನುದಾನ ರಹಿತ ಸೇರಿ 54 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಶೇ.90.86 ಹೆಣ್ಣು ಮಕ್ಕಳು, ಶೇ. 77.71 ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ 35 ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ಲಿಸ್ಟ್ನಲ್ಲಿದ್ದಾರೆ.

ಟಾಪರ್‌ಗಳು

ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ
ಕುಮಟಾ ಸಿವಿಎಸ್‌ಕೆಯ ಕಾರ್ತಿಕ್ ಏಕನಾಥ ರಾವುತ್ಕರ್ 625 ಕ್ಕೆ 621 ಅಂಕ ಪಡೆದು ಶೈಕ್ಷಣಿಕ ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದಾರೆ. ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ. ಅದೇಶ ಶಾಲೆಯ ಭೂಮಿಕಾ ಸತೀಶ ನಾಯ್ಕ 620 ಅಂಕ ಪಡೆದು ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾರೆ. ಹೊನ್ನಾವರದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯ ಶ್ರವಣಕುಮಾರ್ ಶ್ರೀನಾಥ ಶೇಟ್, ಸಿವಿಎಸ್‌ಕೆಯ ವೈಷ್ಣವಿ ರಮೇಶ ನಾಯ್ಕ, ಸುನಂದಾ ನಾಗೇಶ ಶಾನಭಾಗ 619 ಅಂಕ ಪಡೆದು ಜಿಲ್ಲೆಗೆ ತೃತೀಯ, ರಾಜ್ಯಕ್ಕೆ 7 ನೇ ಸ್ಥಾನ ಪಡೆದಿದ್ದಾರೆ. ಇವರೆಲ್ಲರೂ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು.
ಭಟ್ಕಳ ಬೈಲೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್(ಕೆಪಿಎಸ್)ನ ಭಾವನಾ ಪ್ರಭಾಕರ ನಾಯ್ಕ, ತೆರ್ನಮಕ್ಕಿ ಕೆಪಿಎಸ್‌ನ ಹರ್ಷನ್ ನಾಗಯ್ಯ ಗೊಂಡ 618 ಅಂಕ ಪಡೆದು ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದ್ದಾರೆ. ಹೊನ್ನಾವರ ಗೇರುಸೊಪ್ಪ ಸರ್ಕಾರಿ ಹೈಸ್ಕೂಲ್‌ನ ಮೇಘಾ ಎಂ.ಎಸ್. 616 ಅಂಕ ಪಡೆದು ಜಿಲ್ಲೆಗೆ ದ್ವಿತೀಯ, ರಾಜ್ಯಕ್ಕೆ 9 ನೇ ಸ್ಥಾನ ಪಡೆದಿದ್ದಾರೆ.
ಉರ್ದು ಮಾಧ್ಯಮದಲ್ಲಿ ಹೊನ್ನಾವರ ಶ್ರೀ ಶಾರದಾಂಬಾ ಹೈಸ್ಕೂಲ್‌ನ ನೂರೇನ್ ಫಕ್ರುದ್ದೀನ್ ಗನಿಮಾ(608) ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಅದೇ ಶಾಲೆಯ ಅಫೀಫಾ ಖಾನ್, ರುಝಾ ಗುರ್‌ಕರ್ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ಶಿರಸಿ ಶೈಕ್ಷಣಿಕ ಜಿಲ್ಲೆ
ಮಾರಿಕಾಂಬಾ ಹೈಸ್ಕೂಲ್‌ನ ದರ್ಶನ ಸುಬ್ರಾಯ ಭಟ್, ಗೋಳಿ ಹೈಸ್ಕೂಲ್‌ನ ಚಿನ್ಮಯಿ ಶ್ರೀಪಾದ ಹೆಗಡೆ, ಬೈರುಂಬೆ ಹೈಸ್ಕೂಲ್‌ನ ಶ್ರೀರಾಮ ಕೆ.ಎಂ. 625 ಕ್ಕೆ 624 ಅಂಕ ಪಡೆದು, ರಾಜ್ಯಕ್ಕೆ ದ್ವಿತೀಯ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಗೋಳಿಯ ತೃಪ್ತಿ ಗೌಡ ರಾಜ್ಯಕ್ಕೆ ತೃತೀಯ, ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದಾರೆ. ಮಾರಿಕಾಂಬಾ ಹೈಸ್ಕೂಲ್‌ನ ಅನ್ವಿತ್ ಮಂಜುನಾಥ ಮೊಗೇರ, ಸ್ಪಂದನಾ ರವೀಂದ್ರ ಭಟ್, ಸಿದ್ದಾಪುರ ಕವಚೂರಿನ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ವರ್ಷಾ ಮಡ್ಲೂರ್ ಯಲ್ಲಾಪುರ ಬೀಸ್ಗೋಡ್ ಸರ್ಕಾರಿ ಹೈಸ್ಕೂಲ್‌ನ ಸಿಂಚನಾ ಮಹಾಬಲೇಶ್ವರ ಜಡ್ಡಿಪಾಲ್, ಸಿದ್ದಾಪುರ ಲಿಲ್ಟ್ ಫ್ಲವರ್ ಆಂಗ್ಲ ಮಾಧ್ಯಮ ಹೈಸ್ಕೂಲ್‌ನ ನಾಗಶ್ರೀ ರಾಮಚಂದ್ರ ಗೌಡ, ಶಿರಸಿ ಸೇಂಟ್ ಅಂತೋನಿ ಸ್ಕೂಲ್‌ನ ಕೃಷ್ಣ ರವಿ ನಾಯ್ಕ 621 ಅಂಕ ಪಡೆದು ಜಿಲ್ಲೆಗೆ ತೃತೀಯ, ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ.
ನಂದೊಳ್ಳಿ ಸರ್ಕಾರಿ ಪ್ರೌಢಶಾಲೆಯ ಭವ್ಯಾ ಮಂಜುನಾಥ ಭಾಗ್ವತ, ವಿಶ್ವದರ್ಶನ ಸ್ಕೂಲ್‌ನ ಪ್ರಥ್ವಿ ಮೆಣ್ಸುಮನೆ (620), ಮಾರಿಕಾಂಬಾ ಕಾಲೇಜ್‌ನ ನೇಹಾ ರಾಜು ನಾಯ್ಕ, ಗೋಳಿ ಸಿದ್ದಿವಿನಾಯಕ ಹೈಸ್ಕೂಲ್‌ನ ಚೈತನ್ಯ ಗಣಪತಿ ಹೆಗಡೆ, ಭೈರುಂಬೆಯ ರಜತ್ ಶಿವರಾಮ ಭಟ್ಕ (619), ಮಾರಿಕಾಂಬಾ ಕಾಲೇಜ್‌ನ ಶ್ರೀನಿಧಿ ಲಕ್ಷ್ಮೀನಾರಾಯಣ ಹೆಗಡೆ, ಸಾಲ್ಕಣಿ ಲಕ್ಷ್ಮೀ ನರಸಿಂಹ ಹೈಸ್ಕೂಲ್‌ನ ಸಂದೀಪ ಶಂಕರ್ ಹೆಗಡೆ, ದಾಂಡೇಲಿ ಸೇಂಟ್ ಮೈಕಲ್ ಕಾನ್ವೆಂಟ್ ಸ್ಕೂಲ್‌ನ ಆರ್ಯನ್, ಮಲ್ಲಿಕಾರ್ಜುನ ಗಾಳಪ್ಪನವರ್, ಸಿದ್ದಾಪುರ ಪ್ರಶಾಂತಿ ಇಂಗ್ಲಿಷ್ ಮಾಧ್ಯಮ ಶಾಲೆಯ ದಿಷಾ ದಾಮೋದರ ಶಾನಭಾಗ, ಶಿರಸಿಯ ಚಂದನಾ ಸ್ಕೂಲ್‌ನ ಶ್ರೇಯಾ ಹೆಗಡೆ(618), ಸಿದ್ದಾಪುರ ತ್ಯಾಗ್ಲಿ ಸರ್ಕಾರಿ ಹೈಸ್ಕೂಲ್‌ನ ಎನ್.ಎಸ್.ಸಾಧನಾ, ಬೈರುಂಬೆ ಹೈಸ್ಕೂಲ್‌ನ ಮಾನ್ಯಾ ರಮಾಕಾಂತ ಹೆಗಡೆ, ವೈಷ್ಣವಿ ಭಾಗ್ವತ್, ಶಿರಸಿ ಸೇಂಟ್ ಅಂತೋನಿ ಸ್ಕೂಲ್‌ನ ದಿಷಾ ರಾಜೇಶ ನಾಯ್ಕ, ಚಂದನಾ ಸ್ಕೂಲ್‌ನ ಐಶ್ವರ್ಯ ಗೌಡ(617), ಮಾರಿಕಾಂಬಾ ಹೈಸ್ಕೂಲ್‌ನ ಕ್ಷಿತಿಜ್ ಭಟ್, ಬಿದ್ರಕಾನ್ ಎಂಜಿಸಿಎA ಹೈಸ್ಕೂಲ್‌ನ ಸಿಂಚನಾ ಮಹಾಬಲೇಶ್ವರ ಹೆಗಡೆ, ಚಂದನಾ ಸ್ಕೂಲ್‌ನ ಅಲೋಕ ಬಾಲಕೃಷ್ಣ ಹೆಗಡೆ(616) ಅಂಕ ಪಡೆದಿದ್ದು, ಜಿಲ್ಲೆಯ ಟಾಪರ್‌ಗಳಾಗಿದ್ದು, ರಾಜ್ಯದ ಟಾಪ್ 10 ಲಿಸ್ಟ್ನಲ್ಲಿದ್ದಾರೆ.

ತಾಲೂಕುವಾರು ಫಲಿತಾಂಶ

ಉತ್ತರ ಕನ್ನಡ ಜಿಲ್ಲೆ
ತಾಲೂಕು ಫಲಿತಾಂಶ
ಹೊನ್ನಾವರ ಶೇ.96.42
ಭಟ್ಕಳ ಶೇ.95.28
ಕುಮಟಾ ಶೇ.93.07
ಅಂಕೋಲಾ ಶೇ.85.18
ಕಾರವಾರ ಶೇ.79.42
ಶಿರಸಿ ಜಿಲ್ಲೆ
ಸಿದ್ದಾಪುರ ಶೇ. 96.67
ಶಿರಸಿ ಶೇ.91.00
ಯಲ್ಲಾಪುರ ಶೇ.90.84
ಜೊಯಿಡಾ ಶೇ.79.14
ಮುಂಡಗೋಡ ಶೇ.77.78
ಹಳಿಯಾಳ ಶೇ.74.73

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net