

ನವದೆಹಲಿ: ಹಲವು ರಾಜ್ಯಗಳಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಒಂದಿಲ್ಲೊಂದು ಕುತ್ತು ಎದುರಾಗುತ್ತಲೇ ಇದೆ. ಕರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಕಾರಣದಿಂದಾಗಿ ಇದೀಗ 10ನೇ ತರಗತಿ ಪರೀಕ್ಷೆಯನ್ನು ಮತ್ತೊಂದು ರಾಜ್ಯ ರದ್ದು ಪಡಿಸಿ ಶನಿವಾರ ನಿರ್ಧಾರ ಕೈಗೊಂಡಿದೆ.
ಈಗಾಗಲೇ ತೆಲಂಗಾಣ, ತಮಿಳುನಾಡು, ಪಂಜಾಬ್ ಸೇರಿ ಹಲವು ರಾಜ್ಯಗಳಲ್ಲಿ 10ನೇ ತರಗತಿ ಪರೀಕ್ಷೆಯನ್ನು ರದ್ದುಪಡಿಸಿ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ಎಂದು ಘೋಷಿಸಲಾಗಿದೆ.
ನೆರೆಯ ತೆಲಂಗಾಣ ಕೈಗೊಂಡ ತೀರ್ಮಾನವನ್ನೇ ಈಗ ಆಂಧ್ರಪ್ರದೇಶ ಕೂಡ ಅನುಸರಿಸಿದೆ. ಕರೊನ್ಆ ವ್ಯಾಪಕವಾಗಿ ಹಬ್ಬುಉತತ್ಇರುವ ಕಾರಣ 10ನೇ ತರಗತಿ ಪರೀಕ್ಷೆಯನ್ನು ಕೈಗೊಳ್ಳದಿರಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಂಧ್ರಪ್ರದೇಶ ಶಿಕ್ಷಣ ಸಚಿವ ಆದಿಮುಲುಪು ಸುರೇಶ್ ಹೇಳಿಕೆ ನೀಡಿದ್ದಾರೆ.
ಸದ್ಯ ಆಂಧ್ರದಲ್ಲಿ 7,961 ಜನರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ 3,948 ಸಕ್ರಿಯ ಪ್ರಕರಣಗಳಿವೆ. ಇದಲ್ಲದೇ. 96 ಜನರು ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಕರೊನಾ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಪರೀಕ್ಷೆ ನಡೆಸುವುದಿಲ್ಲ ಸರ್ಕಾರ ಘೋಷಿಸಿದೆ.
ಕರ್ನಾಟಕದಲ್ಲಿ ದ್ವಿತೀಯ ಪಿಯು ಇಂಗ್ಲಿಷ್ ಭಾಷಾ ಪರೀಕ್ಷೆ ಯಶಸ್ವಿಯಾಗ ನಡೆದಿದೆ. ಜೂನ್ 25ರಂದು ಎಸ್ಎಸ್ಎಲ್ಸಿ ಪರೀಕ್ಷೆಗೆ ಎಲ್ಲ ಸಿದ್ಧತೆ ನಡೆದಿದೆ ಎಂದು ಸಚಿವ ಸುರೇಶ್ಕುಮಾರ್ ತಿಳಿಸಿದ್ದಾರೆ.