ಮೂರು ಭಾಗಗಳಲ್ಲಿ 'ಮಹಾಭಾರತ' ಸಿನಿಮಾ; ಇದೇ ರಾಜಮೌಳಿ ನಿರ್ದೇಶಿಸಲಿರುವ ಕೊನೆಯ ಚಿತ್ರ! | SS Rajamouli

ವಿಜಯವಾಣಿ (99)
Published on

SS Rajamouli: 'ಮಗಧೀರ', 'ಬಾಹುಬಲಿ' ಸೇರಿದಂತೆ ಹಲವಾರು ಬಿಗ್ ಬಜೆಟ್​ನ ಬ್ಲಾಕ್​​ಬಸ್ಟರ್​ ಸಿನಿಮಾಗಳನ್ನು ಸಿನಿಪ್ರಿಯರ ಮುಂದಿಟ್ಟಿರುವ ಸ್ಟಾರ್​ ನಿರ್ದೇಶಕ ರಾಜಮೌಳಿ, ಇದೀಗ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.

ತಮ್ಮ ಕನಸಿನ ಪ್ರಾಜೆಕ್ಟ್​ 'ಮಹಾಭಾರತ' ಸಿನಿಮಾಗಾಗಿ ಒಂದಷ್ಟು ವರ್ಷಗಳ ಕೆಲಸ ಮತ್ತು ಪೂರ್ವ ತಯಾರಿಗಳ ಅಗತ್ಯವಿದೆ ಎಂದಿರುವ ರಾಜಮೌಳಿ, ಈ ಸಿನಿಮಾವನ್ನು ಮೂರು ವಿಭಾಗಗಳಲ್ಲಿ ಮಾಡುವುದಾಗಿ ತಿಳಿಸಿದ್ದಾರೆ. ಚಿತ್ರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನ್ಯಾಚುರಲ್ ಸ್ಟಾರ್ ನಾನಿ ನಟಿಸಿರುವ 'ಹಿಟ್​-3' ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದ ವೇದಿಕೆಯಲ್ಲಿ ಮಾಹಿತಿ ಹಂಚಿಕೊಂಡರು.

"ಭಾರತೀಯ ಮಹಾಕಾವ್ಯಗಳ ಶ್ರೇಷ್ಠತೆಯನ್ನು ಹೊಸ ಪೀಳಿಗೆಗೆ ಹಾಗೂ ಜಾಗತಿಕ ಮಟ್ಟದಲ್ಲಿ ತೋರಿಸುವ ಬಯಕೆಯಿದೆ. ಪ್ರತಿಯೊಂದು ಭಾಷೆಯ ಪ್ರೇಕ್ಷಕರು ಈ ಚಿತ್ರವನ್ನು ಕಣ್ತುಂಬಿಕೊಳ್ಳಬೇಕು ಎಂಬ ಉದ್ದೇಶದಲ್ಲಿ ಸಿನಿಮಾ ತಯಾರಿಸಲಿದ್ದೇವೆ. ವಿಶೇಷವಾಗಿ ನಾನಿ ಕೂಡ ಮಹಾಭಾರತದ ಭಾಗವಾಗಲಿದ್ದಾರೆ. ಅವರು ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ" ಎಂದು ರಾಜಮೌಳಿ ಖಚಿತ ಪಡಿಸಿದರು. ಆದರೆ, ಪಾತ್ರದ ಬಗ್ಗೆ ಸುಳಿವು ಬಿಟ್ಟುಕೊಡಲಿಲ್ಲ.

ಇದೇ ರಾಜಮೌಳಿ ಕೊನೆಯ ಸಿನಿಮಾ?

ತಂದೆ ವಿಜಯೇಂದ್ರ ಪ್ರಸಾದ್ ಅವರು 'ಮಹಾಭಾರತ' ಚಿತ್ರವನ್ನು ಮೂರು ಭಾಗಗಳಲ್ಲಿ ನಿರ್ಮಿಸಲು ಇಚ್ಛಿಸಿದ್ದಾರೆ. ಇದರ ಸ್ಕ್ರಿಪ್ಟ್‌ನ ಕೆಲಸವು ಕೆಲವು ವರ್ಷಗಳಿಂದ ನಡೆಯುತ್ತಿದೆ ಎಂದಿದ್ದಾರೆ. ಈ ಸಿನಿಮಾ ರಾಜಮೌಳಿ ಅವರ ವೃತ್ತಿಜೀವನದ ಕೊನೆಯ ಸಿನಿಮಾ ಎಂಬ ಮಾತುಗಳು ಸದ್ಯ ಟಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ. ಅಸಲಿಗೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net