

ಕಡಬ: ಎಸ್‌ಆರ್‌ಕೆ ಲ್ಯಾಡರ್ಸ್‌ನ ರಜತ ಸಂಭ್ರಮದ ಆಚರಣೆಯ ಪ್ರಯುಕ್ತ ವರ್ಷ ಪೂರ್ತಿ ವಿವಿಧ ಸರಣಿ ಕಾರ್ಯಕ್ರಮಗಳು ನಡೆದು, ಶನಿವಾರ ಕಡಬ ತಾಲೂಕಿನ ಕಲಾಯಿಗುತ್ತುವಿನಲ್ಲಿ ಅದ್ದೂರಿಯಾಗಿ ಸಮಾರೋಪ ಸಮಾರಂಭ ನಡೆಯಿತು.
ಮಧ್ಯಾಹ್ನದ ಬಳಿಕ ಆರಂಭವಾದ ಕಾರ್ಯಕ್ರಮದಲ್ಲಿ ಕೊಯಿಲ ಗ್ರಾಮದ ವಿವಿಧ ಭಜನಾ ತಂಡಗಳಿಂದ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ನೇತೃತ್ವದಲ್ಲಿ ಕಡಬ ತಾಲೂಕಿನ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ, ಬಳಿಕ ಮಂಗಳೂರು ಶ್ರೀ ಶಬರಿ ಸಿಂಗಾರಿ ಮೇಳದಿಂದ ಚೆಂಡೆ ವಾದನ, ಶೃತಿ ಗಾಯನ ಮೆಲೋಡಿಸ್ ತಂಡದಿಂದ ಸಂಗೀತ ರಸಮಂಜರಿ, ಬಳಿಕ ವಿಶೇಷ ಶೈಲಿಯ ತಿಂಡಿಗಳಿಂದ ಕೂಡಿದ ಉಪಹಾರ, ಸರಿಗಮ ಖ್ಯಾತಿಯ ಪ್ರಜ್ಞಾ ಮರಾಠೆ, ಸಮನ್ವಿ ರೈ ಪುತ್ತೂರು ಅವರಿಂದ ಸುಮಧುರ ಗಾಯನ, ರಿಚರ್ಡ್ ಲೂಯಿಸ್ ಬೆಂಗಳೂರು, ಮಿಮಿಕ್ರಿ ಗೋಪಿ, ಅಸಾದುಲ್ಲಾ ಬೇಗ್, ಕಿರ್ಲೋಸ್ಕರ್ ಸತ್ಯ, ಮೈಸೂರು ಆನಂದ ತಂಡದಿಂದ ಹಾಸ್ಯ ರಸಸಂಜೆ ನಡೆಯಿತು. ಎಸ್‌ಆರ್‌ಕೆ ಲ್ಯಾಡರ್ಸ್ ಮಾಲೀಕ ಕೇಶವ ಅಮೈ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಬಳಿಕ ತುಳು ಚಿತ್ರ ತಂಡದ ಖ್ಯಾತ ತಾರೆಯರ ಸಮಾಗಮ, ಸಾಯಂಕಾಲ ವಿಶೇಷ ಸುಡುಮದ್ದು ಕೊಯಿಲ ಬೆಡಿ ಪ್ರದರ್ಶನ, ಸ್ನೇಹ ಕೂಟ ಸಹಭೋಜನ, ಯಕ್ಷ ರಸ ಸಂಜೆಯಲ್ಲಿ ತೆಂಕುತಿಟ್ಟು ಪ್ರಸಿದ್ಧ ಹಾಸ್ಯ ಕಲಾವಿದರ ಕೂಡುವಿಕೆಯಿಂದ ತುಳು ಯಕ್ಷ ತೆಲಿಕೆ ನಡೆಯಿತು.
ಕಾರ್ಯಕ್ರಮದ ಸ್ಥಳಕ್ಕೆ ಅರ್ದ ಕಿ.ಮೀ. ದೂರದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಿಂದ ಜನರನ್ನು ಬಸ್ಸಿನ ಮುಖಾಂತರ ಕಾರ್ಯಕ್ರಮದ ಸ್ಥಳಕ್ಕೆ ಕೆರೆತರಲಾಯಿತು. ಆರಂಭದಲ್ಲಿ ಹೆಸರು ನೋಂದಣಿ, ಅಮೈ ಕುಟುಂಬಕ್ಕೆ, ಉದ್ಯೋಗಳಿಗೆ, ಗ್ರಾಹಕರಿಗೆ, ಹಿತೈಶಿಗಳಿಗೆ, ವಿಐಪಿಗಳಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ನೋಂದಣಿ ಕೂಪನ್‌ನಲ್ಲಿ 4 ಜನ ಅದೃಷ್ಟವಂತರಿಗೆ ಬೆಳ್ಳಿಯ ಕಾಯಿನ್ ಬಹುಮಾನವಾಗಿ ನೀಡಲಾಯಿತು. 9 ಜನರಿಗೆ ಆಕರ್ಷಕ ಬಹುಮಾನ ನೀಡಲಾಯಿತು. ಎಸ್‌ಆರ್‌ಕೆ ಲ್ಯಾಡರ್ಸ್ ಉತ್ಪಾದಿತ ವಿವಿಧ ರೈತ ಯಂತ್ರೋಪಕರಣಗಳ ಪ್ರದರ್ಶನಕ್ಕಿಡಲಾಗಿತ್ತು.
ಸಭಾಭವನದ ದ್ವಾರದ ಸ್ವಾಗತ ಗೋಪುರದಲ್ಲಿ ರುಚಿಕರ ಪಾನೀಯ ವ್ಯವಸ್ಥೆಯಿತ್ತು. ಲಘು ಉಪಾಹರದಲ್ಲಿ ಸೆಟ್ ದೊಸೆ, ಮಸಾಲಪುರಿ, ಪಾನಿಪೂರಿ, ಚರುಂಬುರಿ, ಹಲಸಿನ ಹಣ್ಣು, ಚಹ, ಕಾಫಿ, ಜ್ಯೂಸ್‌ಗಳ ವಿವಿಧ ಕೌಂಟರ್‌ಗಲ್ಲಿ ವಿತರಣೆ ನಡೆಯಿತು. ಮಕ್ಕಳಿಗೆ, ಪ್ರೌಢರಿಗೆ, ವೃದ್ಧರಿಗೆ ಬೇಕಾದ ವಿಶಿಷ್ಟವಾದ ಸುಚಿ ರುಚಿಯಾದ (ಫಾಸ್ಟ್ ಪುಡ್) ತಿನಿಸುಗಳು ಉಣಬಡಿಸಲಾಗಿತ್ತು. ಇದಕ್ಕಾಗಿ ಒಟ್ಟು 12 ಕೌಂಟರ್‌ಗನ್ನು ತೆರಯಲಾಗಿತ್ತು. ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಸುಮಾರು 21ಬಗೆಯ ತಿನಿಸುಗಳು ರಾತ್ರಿ ಊಟದ ಜತೆಗಿತ್ತು. ಸುಮಾರು 5 ಸಾವಿರ ಜನ ಕಾರ್ಯಕ್ರಮದಲ್ಲಿ ಭಾಗಿಯಾದರು. ಉಪನ್ಯಾಸಕ ಚೇತನ್ ಅನೆಗುಂಡಿ, ಶ್ರಾವ್ಯ ಮಂಗಳೂರು ನಿರೂಪಿಸಿದರು.