

ಬಂಟ್ವಾಳ: ಸಹೋದರ ಸೇವಾ ಸಂಘ ಫರಂಗಿಪೇಟೆ ಆಶ್ರಯದಲ್ಲಿ ಶ್ರೀರಾಮ ವಿದ್ಯಾಸಂಸ್ಥೆಯ ವೇದಿಕೆಯಲ್ಲಿ ನಡೆದ 35ನೇ ವರ್ಷದ ಫರಂಗಿಪೇಟೆ ಶ್ರೀಶಾರದಾ ಮಹೋತ್ಸವದ ಮೂರನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಡಾ.ಪ್ರಿಯಾ ಹರೀಶ್ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ವಹಿಸಿದ್ದರು. ಉದ್ಯಮಿ ಬಾಲಕೃಷ್ಣ ಗಾಂಭೀರ ಸುಜೀರುಗುತ್ತು, ಉತ್ಸವ ಸಮಿತಿ ಅಧ್ಯಕ್ಷ ಅನೀಶ್ ಕೊಪ್ಪಳ, ಕೋಶಾಧಿಕಾರಿ ಎ.ಕೆ.ಗಿರೀಶ್ ಶೆಟ್ಟಿ ಕುಂಪನಮಜಲು, ಸಹೋದರ ಸೇವಾ ಸಂಘದ ಅಧ್ಯಕ್ಷ ಸುಕುಮಾರ್ ಕೊಪ್ಪಳ, ಕಾರ್ಯದರ್ಶಿ ಸುಕುಮಾರ್ ಕರ್ಕೇರ ಧರ್ಮಗಿರಿ ಉಪಸ್ಥಿತರಿದ್ದರು. ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿರುವ ಅದಿತಿ ಶೆಟ್ಟಿಯನ್ನು ಸನ್ಮಾನಿಸಲಾಯಿತು. ದೇವರ ಮಂಟಪ ಮತ್ತು ವೇದಿಕೆಯ ಅಲಂಕಾರವನ್ನು ಉಚಿತ ನೀಡಿದ ಸಂಚಾಲಕ ಮನೋಹರ ನಾಯ್ಕ ಅವರನ್ನು ಗೌರವಿಸಲಾಯಿತು. ಸಂಚಾಲಕ ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿ, ದೇವದಾಸ್ ಕೆ.ಆರ್.ಕೊಡ್ಮಣ್ ನಿರೂಪಿಸಿದರು.