

ಕಡಬ: ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.2ರಿಂದ ಅ.12ರ ವಿಜಯದಶಮಿ ತನಕ ನವರಾತ್ರಿ ಉತ್ಸವ ನಡೆಯಿತು.
ಪ್ರತಿದಿನ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶನಿವಾರ ವಿಜಯದಶಮಿ ಪ್ರಯುಕ್ತ ಬೆಳಗ್ಗೆ ಮಹಾಗಣಪತಿ ಹೋಮ, ಅಕ್ಷರಾಭ್ಯಾಸ ಮಧ್ಯಾಹ್ನ ಮಹಾಪೂಜೆ, ಗಣಪತಿ ಮಹಾಪೂಜೆ, ಪ್ರಸಾದ ವಿತರಣೆಯಾಗಿ, ನವಾನ್ನ ಸಂತರ್ಪಣೆ ನಡೆಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ರಾವ್ ನಗ್ರಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹೇಮಂತ್ ರೈ ಮನವಳಿಕೆಗುತ್ತು, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಹರಿಪ್ರಸಾದ ಉಪಾಧ್ಯಾಯ, ರಾಧಾಕೃಷ್ಣ ರೈ ಪರಾರಿಗುತ್ತು, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ವಿಠಲ ರೈ ಪೆರಾಬೆ ಪಟ್ಟೆ, ವಾಸಪ್ಪ ಗೌಡ ಕೆದ್ದೊಟ್ಟೆ, ಮೋಹನ ಶರವೂರು, ಪುಷ್ಪಲತಾ ಕೆ.ಹಳೆನೇರೆಂಕಿ, ರೋಹಿಣಿ ಬಿ.ಎನ್ ನಾಡ್ತಿಲ ಗೌರವ ಸದಸ್ಯರಾದ ದಾಮೋದರ ಗೌಡ ಶರವೂರು ಮೊದಲಾದವರು ಇದ್ದರು.