ಬೆಂಗಳೂರು: ಗುರು ಪೌರ್ಣಿಮೆ ಅಂಗವಾಗಿ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮವು ನಾಳೆಯಿಂದ (ಭಾನುವಾರ) 5 ದಿನಗಳ ಕಾಲ ನಡೆಯಲಿದೆ.
ಶ್ರೀಶೈಲ ಮಲ್ಲಿಕಾರ್ಜುನ ಸಮಾಜೋತ್ಥಾನ ಫೌಂಡೇಶನ್ ಆಯೋಜಿಸಿರುವ ಕಾರ್ಯಕ್ರಮವು ವಿಜಯನಗರದ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯಲಿದೆ. ಭಾನುವಾರ ಸಂಜೆ 6 ನಡೆಯಲಿರುವ ಸಮಾರಂಭವನ್ನು ಶಾಸಕ ಪ್ರಿಯಕೃಷ್ಣ ಉದ್ಘಾಟಿಸಲಿದ್ದು, ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ, ಎಡೆಯೂರು, ನಾಗಣಸೂರ ಮತ್ತಿತರ ಮಠಗಳ ಶ್ರೀಗಳು ಆಗಮಿಸಲಿದ್ದಾರೆ.
ಜು.7ರಿಂದ 10ರವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಶ್ರೀಶೈಲ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಲಿದ್ದು, ಭಕ್ತರು ಶುಚೀರ್ಭೂತರಾಗಿ ಮಡಿಯಿಂದ ಹೂವು, ಪತ್ರೆಗಳೊಂದಿಗೆ ಪಾಲ್ಗೊಳ್ಳುವಂತೆ ಆಯೋಜಕರು ವಿನಂತಿಸಿದ್ದಾರೆ. ಸಂಜೆ ಶ್ರೀ ಸಿದ್ಧಾಂತ ಶಿಖಾಮಣಿ ಆಶೀರ್ವಚನ ಸಮಾರಂಭ ನಡೆಯಲಿದ್ದು, ಪ್ರತಿವರ್ಷದಂತೆ ವೇದಭಾಸ್ಕರ, ನಾದಭಾಸ್ಕರ, ಪಂಚಾಚಾರ್ಯ ಸೇವಾಭೂಷಣ ಪ್ರಶಸ್ತಿಗಳ ಪ್ರದಾನ ಹಾಗೂ ಜು.10ರವಂದು ವಿಶೇಷವಾಗಿ ಜಗದ್ಗುರು ಶ್ರೀಪತಿ ಪಂಡಿತಾರಾಧ್ಯ ಭಗವತ್ಪಾದರ ಜಯಂತಿ ನಡೆಯಲಿದೆ. ಅದೇ ದಿಗ ಗುರು ಪೌರ್ಣಿಮೆ ಅಂಗವಾಗಿ ರಾಜಾಜಿನಗರದ ಪ್ರವೇಶದ್ವಾರದಲ್ಲಿರುವ ಜಗದ್ಗುರು ರೇಣುಕಾಚಾರ್ಯರ ಕಂಚಿತ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಶ್ರೀಶೈಲ ಜಗದ್ಗುರುಗಳ ಪಾದಪೂಜೆ ನೆರವೇರಲಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶ್ರೀಶೈಲ ಜಗದ್ಗುರುಗಳ ಪೂಜಾ ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಲಾತೂರ್‌ನಲ್ಲಿ ಕಾಶೀ ಪೀಠದ ರಾಷ್ಟ್ರೀಯ ಮಾತೃಶಕ್ತಿ ಪ್ರಶಸ್ತಿ ಪ್ರದಾನ; ವೀರಯೋಧರ ಪತ್ನಿಯರಿಗೆ ಗೌರವ