ದೆವ್ವದ ಮಾತು ಕೇಳಿ ಆಣೆ ಪ್ರಮಾಣಕ್ಕೆ ಹೋಗುತ್ತಾರಾ?; ಸುಮಲತಾಗೆ ತಿರುಗೇಟು ನೀಡಿದ ಶ್ರೀರಂಗಪಟ್ಟಣ ಶಾಸಕ

Sumalathaa
Published on

ಮೈಸೂರು: ಮಂಡ್ಯ ಜಿಲ್ಲೆಯ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಪಂಥಾಹ್ವಾನ ನೀಡಿದ ವಿಚಾರವಾಗಿ, ಇದೀಗ ಶ್ರೀರಂಗಪಟ್ಟಣ ಶಾಸಕ ರವಿಂದ್ರ ಶ್ರೀ ಕಂಠಯ್ಯಾ ತಿರುಗೇಟು ನೀಡಿದ್ದಾರೆ. ದೆವ್ವದ ಜೊತೆ ಆಣೆ ಪ್ರಮಾಣಕ್ಕೆ ಹೋಗುತ್ತಾರಾ. ಸಂಸದೆ ಮಾತು ಕೇಳಿದರೆ ದೆವ್ವದ ಬಾಯಲ್ಲಿ ಭಗವದ್ಗೀತೆ ಕೇಳಿದ ರೀತಿ ಆಗುತ್ತಿದೆ ಎಂದು ಹೇಳಿದ್ದಾರೆ.

ಜೆಡಿಎಸ್​ ಶಾಸಕರಾದ ನಾವು ದೇವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ. ಇಂಥಹವರು ಯಾರೋ ಆಣೆ ಪ್ರಮಾಣಕ್ಕೆ ಕರೆದರೆ ಹೋಗುವುದಕ್ಕೆ ಸಾಧ್ಯವಾ? ಮೊದಲು ಸಂಸದೆ ರಾಷ್ಟ್ರೀಯ ಹೆದ್ದಾರಿ ಡೀಲ್ ವಿಚಾರದಲ್ಲಿ ತಮ್ಮವರನ್ನು ಖಾಸಗಿ ಹೋಟೆಲ್​ಗೆ ಕಳುಹಿಸಿದ್ದು ಯಾಕೆ ಎಂಬುವುದನ್ನು ಹೇಳಲಿ. ಆವಾಗಾ ಯಾರು ಸತ್ಯವಂತರು ಎಂಬುವುದು ಗೊತ್ತಾಗುತ್ತದೆ ಎಂದು ಸವಾಲೆಸೆದಿದ್ದಾರೆ.

ಸಂಸದೆಯ ಸುತ್ತ ಇರುವವರೆಲ್ಲಾ ರೈತರ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡಿರುವ ಜನ. ನೂರಾರು ಎಕರೆಗೆ ನಕಲಿ ದಾಖಲೆ ಸೃಷ್ಟಿಸಿ ಹಣ ಮಾಡಿದ ದೊಡ್ಡ ಗ್ಯಾಂಗ್ ಸಂಸದರ ಸುತ್ತ ಇದೆ. ಇವರು ನಮ್ಮ ಶಾಸಕರ ಬಗ್ಗೆ ಮಾತನಾಡುತ್ತಾರೆ. ಇಂತಹ ಸಂಸದೆ ಕರೆದಾಗ ಆಣೆ ಪ್ರಮಾಣಕ್ಕೆ ಹೋಗುವ ಪ್ರಮೇಯ ಬರುವುದಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಂಸದರ ವಿರುದ್ಧ ಜನಾಕ್ರೋಶ ಶುರುವಾಗಿದೆ. ಜನರೇ ಅವರಿಗೆ ಪಾಠ ಕಲಿಸುತ್ತಾರೆ. ಸಂಸದರು ಬೆದರಿಕೆ ಹಾಕುವ ರೀತಿ ಮಾತನಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಸಂಸದರ ಬೆಂಬಲಿಗರು ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ಜಿಲ್ಲೆಯಲ್ಲಿ ಪ್ರತಿಭಟನೆಯೂ ನಡೆಯುತ್ತಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net