More

    ಗಾಂಧಿನಗರದಲ್ಲಿ ಡಿಫೆನ್ಸ್​ ಎಕ್ಸ್​ಪೋಗೆ ಚಾಲನೆ: ಹೊಸ ಆರಂಭದ ಸಂಕೇತವೆಂದ ಪ್ರಧಾನಿ ಮೋದಿ

    ಅಹಮದಾಬಾದ್​: ಗುಜರಾತಿನ ಗಾಂಧಿನಗರದಲ್ಲಿ ಆಯೋಜನೆಗೊಂಡಿರುವ ಸ್ವದೇಶಿ ರಕ್ಷಣಾ ಉತ್ಪನ್ನಗಳನ್ನು ಪ್ರದರ್ಶಿಸುವ ಭಾರತದ ಅತಿದೊಡ್ಡ ಡಿಫೆನ್ಸ್​ ಎಕ್ಸ್​ಪೋಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಚಾಲನೆ ನೀಡಿದರು.

    ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಕಾರ್ಯಕ್ರಮವು ಭಾರತದ ವ್ಯವಹಾರಿಕ ಕೌಶಲಗಳ ಮೇಲೆ ವಿಶ್ವದ ನಂಬಿಕೆಯನ್ನು ಬಲಗೊಳಿಸಲಿದೆ ಎಂದರು.

    ನಮ್ಮ ದೇಶದಲ್ಲಿ ಈ ಹಿಂದೆಯೂ ಡಿಫೆನ್ಸ್ ಎಕ್ಸ್‌ಪೋ ನಡೆಯುತ್ತಿತ್ತು ಆದರೆ ಡಿಫೆನ್ಸ್​ ಎಕ್ಸ್​ಪೋ 2022 ಅಭೂತಪೂರ್ವವಾಗಿದೆ. ಇದು ಹೊಸ ಆರಂಭದ ಸಂಕೇತವಾಗಿದೆ. ಕೇವಲ ಭಾರತೀಯ ಕಂಪನಿಗಳು ಮಾತ್ರ ಭಾಗವಹಿಸುತ್ತಿರುವ ದೇಶದ ಮೊದಲ ಡಿಫೆನ್ಸ್ ಎಕ್ಸ್‌ಪೋ ಇದಾಗಿದೆ. ಇಲ್ಲಿ ಕೇವಲ ಮೇಡ್ ಇನ್ ಇಂಡಿಯಾ ರಕ್ಷಣಾ ಸಾಧನಗಳು ಮಾತ್ರ ಇವೆ ಎಂದರು.

    ಡಿಫೆನ್ಸ್​ ಎಕ್ಸ್​ಪೋ ಜೊತೆಗೆ ಪ್ರಧಾನಿ ಮೋದಿ, ಭಾರತದ ಬಾಹ್ಯಾಕಾಶ ಸಂಬಂಧಿತ ರಕ್ಷಣಾ ಸನ್ನದ್ಧತೆಯನ್ನು ಹೆಚ್ಚಿಸಲು ‘ಮಿಷನ್ ಡೆಫ್​ಸ್ಪೇಸ್​’ ಅನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು. ಅಲ್ಲದೆ, ಗುಜರಾತಿನ ಬನಸ್ಕಾಂತದಲ್ಲಿ 1,000 ಕೋಟಿ ವೆಚ್ಚದ ಡೀಸಾ ವಾಯುನೆಲೆಯ ಶಂಕುಸ್ಥಾಪನೆ ಸಮಾರಂಭವನ್ನು ನಡೆಸಿದರು. ಇದು ರಕ್ಷಣಾ ಪಡೆಗಳಿಗೆ ವಾಯು ಮತ್ತು ಸಮುದ್ರ ಕಾರ್ಯಾಚರಣೆಗಳನ್ನು ಏಕಕಾಲದಲ್ಲಿ ನಡೆಸಲು ಅನುವು ಮಾಡಿಕೊಡುತ್ತದೆ. 21 ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ.

    ಇದೇ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾತನಾಡಿ, ಎಕ್ಸ್‌ಪೋ ದೇಶದ ಬಲಿಷ್ಠ ರಕ್ಷಣಾ ಕಾರ್ಯವಿಧಾನ ಮತ್ತು ‘ಆತ್ಮನಿರ್ಭರ್ ಭಾರತ್’ನ ಮನೋಭಾವವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.

    ಅಂದಹಾಗೆ ಇಂದಿನಿಂದ ಅ. 22 ರವರೆಗೆ ಗುಜರಾತ್‌ನ ಗಾಂಧಿನಗರದಲ್ಲಿ ಎಕ್ಸ್‌ಪೋ ಮುಂದುವರಿಯಲಿದೆ. ಈವೆಂಟ್‌ನ 12 ನೇ ಆವೃತ್ತಿಯನ್ನು ‘ಹೆಮ್ಮೆಯ ಹಾದಿ’ ಎಂಬ ಧ್ಯೇಯ ವಾಕ್ಯದ ಮೇಲೆ ಆಯೋಜಿಸಲಾಗಿದೆ. (ಏಜೆನ್ಸೀಸ್​)

    ಮಾವಿನ ಹಣ್ಣುಗಳನ್ನು ಕದ್ದ ಪೊಲೀಸ್​ ಅಧಿಕಾರಿಯ ಸುಳಿವೇ ಇಲ್ಲ: ಕೋರ್ಟ್​ ಮೆಟ್ಟಿಲೇರಿದ ಹಣ್ಣು ಮಾರಾಟಗಾರ

    ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಚಿತ್ರೀಕರಿಸಿದ್ದಕ್ಕೆ ಯುವಕರಿಬ್ಬರನ್ನು ಕೂಡಿಹಾಕಿ ನರ್ಸ್​ಗಳಿಂದ ಥಳಿತ!

    ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹುದ್ದೆಗೆ ತೀವ್ರ ಪೈಪೋಟಿ: ಹೊಸ ಅಧ್ಯಕ್ಷರ ಆಯ್ಕೆಗೆ ನಡೆದಿದೆ ಹುಡುಕಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts