'ಐಟಿ ದಾಳಿ... ಇವತ್ತು ಇವರ ಮೇಲೆ ನಾಳೆ ಅವರ ಮೇಲೆ' ಎಂದ ಶ್ರೀರಾಮುಲು

sriramulu
Published on

ರಾಯಚೂರು: ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಆಪ್ತರ ಮೇಲೆ ನಡೆಯುತ್ತಿದೆ ಎನ್ನಲಾಗುತ್ತಿರುವ ಐಟಿ ದಾಳಿ ಬಗ್ಗೆ ಸಾರಿಗೆ ಸಚಿವ ಬಿ.ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಕಾನೂನು ಪ್ರಕಾರ ಐಟಿ ದಾಳಿಗಳು ಆಗಬೇಕು ಅಂತ ಇರುತ್ತೆ, ಅದು ನಡೆಯುತ್ತೆ. ಇವತ್ತು ಒಬ್ಬರ ಮೇಲೆ ಆದ್ರೆ ನಾಳೆ ಇನ್ನೊಬ್ಬರ ಮೇಲೆ ಆಗುತ್ತೆ ಎಂದಿದ್ದಾರೆ.

ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, "ಐಟಿ ದಾಳಿ ಇವತ್ತು ಇವರ ಮೇಲೆ ಆದ್ರೆ ನಾಳೆ ಅವರ ಮೇಲೆ ಆಗುತ್ತೆ. ಇವರ ಮೇಲೆ ಅವರ ಮೇಲೆ ಅಂತ ಏನಿಲ್ಲ. ಕಾನೂನಾತ್ಮಕವಾಗಿ ಆವಾಗವಾಗ ಐಟಿ ರೇಯ್ಡ್​ ನಡೀಬೇಕು ಅಂತ ಇರುತ್ತೆ. ಅದು ಆಗುತ್ತೆ" ಎಂದರು.

ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮ್ಯಾಂಡ್​ ಟಾರ್ಗೆಟ್​ ಮಾಡ್ತಿದ್ಯಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, "ಹಾಗೆ ಹೇಳ್ತಾ ಹೋದ್ರೆ ಐಟಿ ರೇಯ್ಡ್​​ ಮಾಡೋದೇ ತಪ್ಪು ಅನ್ನೋ ಹಾಗಾಗುತ್ತೆ. ಕಾನೂನು ಪ್ರಕಾರ ಅದು ಅದರ ಕೆಲಸ ಮಾಡ್ತಿದೆ. ಇಲ್ಲಿ ಯಾರದು ತಪ್ಪು ಅಂತ ನಾನು ಹೇಳಲ್ಲ" ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net