More

    ಲಖೀಂಪುರ್​ ಖೇರಿ ಘಟನೆ: ನಿವೃತ್ತ ನ್ಯಾಯಮೂರ್ತಿಗಳ ತನಿಖಾ ಆಯೋಗ ನೇಮಕ

    ಲಖನೌ: ಉತ್ತರಪ್ರದೇಶದ ಲಖೀಂಪುರ್​ ಖೇರಿಯಲ್ಲಿ ಅಕ್ಟೋಬರ್​ 3 ರಂದು ಎಂಟು ಜನರು ಮೃತಪಟ್ಟಿರುವ ಉದ್ವಿಗ್ನ ಪ್ರಸಂಗದ ತನಿಖೆಗೆ ಯುಪಿ ಸರ್ಕಾರ ಸಮಿತಿಯೊಂದನ್ನು ನೇಮಿಸಿದೆ. ಈ ಏಕಸದಸ್ಯ ಸಮಿತಿಗೆ ಅಲಹಾಬಾದ್​ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್​ ಕುಮಾರ್​ ಶ್ರೀವಾಸ್ತವ ಅವರನ್ನು ನೇಮಿಸಲಾಗಿದೆ.

    ಅ.3 ರ ಭಾನುವಾರ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರ ಮಗ ಆಶಿಶ್ ಮಿಶ್ರಗೆ ಸೇರಿದ ಕಾರು ಪ್ರತಿಭಟನಾನಿರತ ರೈತರ ಮೇಲೆ ಹಾಯಿತು. ಇದರಿಂದಾಗಿ 4 ಜನ ರೈತರು ಮೃತಪಟ್ಟರು. ನಂತರ ರೊಚ್ಚಿಗೆದ್ದ ರೈತರು ಕಾರಿನ ಚಾಲಕ ಮತ್ತು ಮೂವರು ಬಿಜೆಪಿ ಕಾರ್ಯಕರ್ತರನ್ನು ಥಳಿಸಿ ಕೊಂದರು ಎಂದು ಆರೋಪಿಸಲಾಗಿದೆ.

    ಇದನ್ನೂ ಓದಿ: ರಂಗೇರಿದ ಸಿಂದಗಿ ಉಪ ಚುನಾವಣೆ: ಕಾಂಗ್ರೆಸ್ ರ‌್ಯಾಲಿಗೆ ಮಕ್ಕಳ ಬಳಕೆ

    ಈ ಘಟನೆಯ ಬಗ್ಗೆ ಎರಡು ತಿಂಗಳೊಳಗೆ ತನಿಖೆ ನಡೆಸಿ ನೈಜ ಚಿತ್ರಣ ನೀಡಲು ತನಿಖಾ ಸಮಿತಿಗೆ ಸೂಚಿಸಿ, ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಸ್ಥಿ, ಅ.6 ರಂದು ಆದೇಶ ಹೊರಡಿಸಿದ್ದಾರೆ.

    ಲಖೀಂಪುರ್​ ಖೇರಿ ಕೇಸ್​: ಕೇಂದ್ರ ಸಚಿವರ ಪುತ್ರನಿಗೆ ಪೊಲೀಸ್​ ಸಮನ್ಸ್

    ಕರೊನಾ ಸವಾಲು ಇನ್ನೂ ಮುಗಿದಿಲ್ಲ; ಅತಿಹೆಚ್ಚು ಸಕ್ರಿಯ ಪ್ರಕರಣಗಳಿರುವ ಐದು ರಾಜ್ಯಗಳಿವು

    ಮಗಳ ಪಾಡು ನೋಡಲಾಗದೆ ಪ್ರಾಣ ತೆತ್ತ ತಂದೆ! ಹಲವು ದಿನಗಳ ಕಾಲ ಮೊಬೈಲ್​ನಲ್ಲೇ ಅಡಗಿದ್ದ ಸತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts