More

    Lakhimpur Kheri Case: ತನಿಖೆಗೆ ಹಿರಿಯ ಐಪಿಎಸ್​ ಅಧಿಕಾರಿಗಳ ಎಸ್​​ಐಟಿ; ನಿವೃತ್ತ ನ್ಯಾಯಮೂರ್ತಿ ಆರ್​.ಕೆ.ಜೈನ್​ ಮೇಲ್ವಿಚಾರಣೆ

    ನವದೆಹಲಿ: ನಾಲ್ವರು ರೈತರು ಸೇರಿದಂತೆ ಎಂಟು ಜನರು ಮೃತಪಟ್ಟಿದ್ದ ಉತ್ತರಪ್ರದೇಶದ ಲಖೀಂಪುರ್​ ಖೇರಿ ಪ್ರಕರಣದ ತನಿಖೆಯ ಮೇಲ್ವಿಚಾರಣೆ ನಡೆಸಲು ಪಂಜಾಬ್​ ಮತ್ತು ಹರಿಯಾಣ ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ರಾಕೇಶ್​ ಕುಮಾರ್ ಜೈನ್​ ಅವರನ್ನು ಸುಪ್ರೀಂ ಕೋರ್ಟ್​ ನೇಮಿಸಿದೆ. ಜೊತೆಗೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್​ಐಟಿ)ವನ್ನು ಪುನರ್​​ರಚಿಸಿರುವ ನ್ಯಾಯಾಲಯ, ಮೂವರು ಹಿರಿಯ ಐಪಿಎಸ್​ ಅಧಿಕಾರಿಗಳನ್ನು ಎಸ್​ಐಟಿ ಸದಸ್ಯರನ್ನಾಗಿ ನೇಮಿಸಿದೆ.

    ಅಕ್ಟೋಬರ್ 3 ರಂದು ಲಖೀಂಪುರ್​ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರದ ಗೃಹ ಖಾತೆಯ ರಾಜ್ಯ ಸಚಿವರಾದ ಅಜಯ್​ ಕುಮಾರ್​ ಮಿಶ್ರ ಅವರ ಪುತ್ರ ಆಶಿಶ್​ ಮಿಶ್ರರ ಕಾರು ಹರಿದು, ತದನಂತರ ಹಿಂಸಾಚಾರ ಮತ್ತು ಗಲಭೆ ಉಂಟಾಗಿತ್ತು ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಆಶಿಶ್ ಮಿಶ್ರ ಸೇರಿದಂತೆ ಇನ್ನೂ ಹಲವು ಆರೋಪಿಗಳನ್ನು ಯುಪಿ ಪೊಲೀಸರು ಬಂಧಿಸಿದ್ದರೂ ಈವರೆಗೆ ಚಾರ್ಜ್​ಶೀಟ್​ ಸಲ್ಲಿಸಲಾಗಿಲ್ಲ.

    ಇದನ್ನೂ ಓದಿ: ಬಿಟ್​ಕಾಯಿನ್​ ಹಾವಲ್ಲ, ಕಾಂಗ್ರೆಸ್​ನವರು ಎರಡು ತಲೆಯ ಮಣ್ಣುಮುಕ್ಕ ಹಾವು: ರೇಣುಕಾಚಾರ್ಯ

    ಪ್ರಕರಣದಲ್ಲಿ ನಿಷ್ಪಕ್ಷಪಾತವಾದ ತನಿಖೆ ಕೋರಿ ವಕೀಲರಿಬ್ಬರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ನ್ಯಾಯಪೀಠ, ಯುಪಿ ಪೊಲೀಸರ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ನಿವೃತ್ತ ಹೈಕೋರ್ಟ್​ ನ್ಯಾಯಾಧೀಶರೊಬ್ಬರು ತನಿಖೆಯ ಮೇಲ್ವಿಚಾರಣೆ ಮಾಡಬೇಕು, ಸ್ಥಳೀಯ ಅಧಿಕಾರಿಗಳನ್ನೇ ಹೊಂದಿದ ತನಿಖಾ ತಂಡದ ಬದಲಿಗೆ ಹೊರರಾಜ್ಯದ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಶೀಘ್ರ ಕಾರ್ಯಾಚರಣೆ ನಡೆಯಬೇಕು ಎಂದು ನವೆಂಬರ್​ 12ರ ವಿಚಾರಣೆಯಲ್ಲಿ ಅಭಿಪ್ರಾಯಪಟ್ಟಿತ್ತು. ಇದಕ್ಕಾಗಿ ಸರ್ಕಾರದಿಂದ ಅಧಿಕಾರಿಗಳ ಹೆಸರುಗಳನ್ನು ಸೂಚಿಸಲು ಹೇಳಿತ್ತು.

    ಇಂದು ನಡೆದ ವಿಚಾರಣೆಯ ನಂತರ, ಐಪಿಎಸ್​ ಅಧಿಕಾರಿಗಳಾದ ಎಸ್​.ಬಿ.ಶಿರೋಡ್ಕರ್​, ದೀಪಿಂದರ್​ ಸಿಂಗ್ ಮತ್ತು ಪದ್ಮಜಾ ಚೌಹಾನ್​ ಅವರನ್ನು ಎಸ್​​ಐಟಿಯ ಸದಸ್ಯರನ್ನಾಗಿ ನೇಮಿಸಿ, ಕೋರ್ಟ್​ ಆದೇಶ ಹೊರಡಿಸಿದೆ. ಈ ಎಸ್​ಐಟಿಯ ತನಿಖೆಯನ್ನು ಆಧರಿಸಿ, ಮೇಲ್ವಿಚಾರಕ ನಿವೃತ್ತ ನ್ಯಾಯಮೂರ್ತಿ ಆರ್​.ಕೆ.ಜೈನ್​ ಸಲ್ಲಿಸುವ ವರದಿಯ ಮೇಲೆ ಚಾರ್ಜ್​ಶೀಟ್​ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು. (ಏಜೆನ್ಸೀಸ್)

    ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್​ ಪೊಲೀಸ್​ ವಶಕ್ಕೆ; ಬಂಧಿಸಲು ಹೋದ ಇನ್​​ಸ್ಪೆಕ್ಟರ್​ ಮೇಲೆ ಹಲ್ಲೆ

    ವಿದ್ಯಾರ್ಥಿನಿ ಆತ್ಮಹತ್ಯೆ: ಲೈಂಗಿಕ ದೌರ್ಜನ್ಯ ಎಸಗಿದ ಶಿಕ್ಷಕ, ಕ್ರಮ ಕೈಗೊಳ್ಳದ ಮುಖ್ಯಶಿಕ್ಷಕಿ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts