

ಉಪ್ಪಿನಂಗಡಿ: ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹಿಂದು ಧರ್ಮಾಚರಣೆಗೆ ವ್ಯವಸ್ಥಿತ ಅಡ್ಡಿ ಆತಂಕಗಳನ್ನು ಸೃಷ್ಟಿಸುವ ಕಾರ್ಯ ನಡೆಯುತ್ತಿದ್ದು, ಸಂಘಟಿತ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗಿದೆ. ಹಿಂದು ಸಮಾಜದ ಬಲವರ್ಧನೆಗಾಗಿ ಶ್ರೀನಿವಾಸ ಕಲ್ಯಾಣೋತ್ಸವ ಮತ್ತು ಹಿಂದವಿ ಸಾಮ್ರಾಜ್ಯೋತ್ಸವವನ್ನು ನ.29, 30ರಂದು ಆಯೋಜಿಸಲಾಗಿದೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯ ವಠಾರದಲ್ಲಿ ಭಾನುವಾರ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ- ಸಾಮೂಹಿಕ ವಿವಾಹ- ಹಿಂದವಿ ಸಾಮ್ರಾಜ್ಯೋತ್ಸವದ ಆಮಂತ್ರಣ ಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಶತಾಬ್ದಿ ಹಿನ್ನೆಲೆಯಲ್ಲಿ 100 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ ಮಾತನಾಡಿದರು. ಧರ್ಮ ರತ್ನ ಪ್ರಶಸ್ತಿ ಪುರಸ್ಕೃತ ಅರುಣ್ಕುಮಾರ್ ಪುತ್ತಿಲ ಅವರನ್ನು ಹಿರಿಯ ವೈದ್ಯ ಡಾ.ಕೆ.ಜಿ.ಭಟ್ ಸನ್ಮಾನಿಸಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಉದ್ಯಮಿ ಸುಜೀರ್ ಗಣಪತಿ ನಾಯಕ್, ಪ್ರಮುಖರಾದ ಜಯಂತ ಪೊರೋಳಿ, ಪ್ರಾಣೇಶ್ ಕೆಮ್ಮಾಯಿ, ಪ್ರವೀಣ್ ಶೆಟ್ಟಿ ತಿಂಗಳಾಡಿ ಉಪಸ್ಥಿತರಿದ್ದರು.
ಹೇರಂಭ ಶಾಸ್ತ್ರಿ, ಕೈಲಾರ್ ರಾಜಗೋಪಾಲ ಭಟ್, ಗಣೇಶ್ ಕುಲಾಲ್, ಪ್ರಸನ್ನ ಪಾತಾಳ, ಈಶ್ವರ ಭಟ್, ರಾಜೇಶ್ ಶೆಟ್ಟಿ, ರೂಪೇಶ್ ನಾಯಕ್, ಪ್ರಶಾಂತ್ ಶಿವಾಜಿನಗರ, ಮಹೇಂದ್ರ ವರ್ಮ ಬಜತ್ತೂರು, ಸುಜಿತ್ ಪಾಣಾಜೆ, ಚಿದಾನಂದ ಪಂಚೇರು, ಲಕ್ಷ್ಮಣ ನೆಡ್ಚಿಲ್, ಗುರುರಾಜ ಭಟ್ ನೆಕ್ಕಿಲಾಡಿ, ಜನಾರ್ದನ ನೆಕ್ಕಿಲಾಡಿ, ಪ್ರವೀಣ್ ಆಚಾರ್ಯ, ರವೀಂದ್ರ ರೈ ಹಿರೆಬಂಡಾಡಿ, ರಾಜೇಶ್ ಕೋಡಂಗೆ, ಮೋಹನ್ ದಾಸ್ ಬಜತ್ತೂರು, ಹರೀಶ್ ನಾಯಕ್, ಜಯರಾಮ ಆಚಾರ್ಯ, ಕಿಶೋರ್ ಕೋಟೆ, ರಮೇಶ್ ಭಂಡಾರಿ, ಶೇಖರ್ ದುರ್ಗಾಗಿರಿ, ಕೇಶವ ನಾಯ್ಕ ಬೆತ್ತೋಡಿ, ಮೋಹನ ಗೌಡ ಪಲ್ಲದಕೋಡಿ, ವೆಂಕಟರಮಣ ಭಟ್ ಮುಂಚಿಕಾನ, ಕಿಶೋರ್ ಕುಮಾರ್ ಜೋಗಿ, ಗಂಗಾಧರ ಟೈಲರ್, ರಾಜಗೋಪಾಲ ಹೆಗ್ಡೆ, ಲೋಕೇಶ್ ಬೆತ್ತೋಡಿ, ಚಂದ್ರಶೇಖರ್ ಮಡಿವಾಳ ಮತ್ತಿತರರಿದ್ದರು.