

ಗುರುಪುರ: ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ 2023&24ನೇ ಸಾಲಿನ ವಿಶೇಷ ಸಂಗೀತ ನೃತ್ಯ ಪರೀೆಯ ಭರತನಾಟ್ಯ ವಿದ್ವತ್ ಅಂತಿಮ ವಿಭಾಗದ ಪರೀೆಯಲ್ಲಿ ಶ್ರೀನಿಧಿ ಎಸ್. ಸುವರ್ಣ ಅವರು ಉನ್ನತ ಶ್ರೇಣಿಯೊಂದಿಗೆ ತೇರ್ಗಡೆಯಾಗಿದ್ದಾರೆ.
ವಾಮಂಜೂರಿನ ಅಮೃತೇಶ್ವರ ನಾಟ್ಯಾಲಯ ಸಂಸ್ಥೆಯ ನೃತ್ಯಗುರು ವಿದುಷಿ ಚಿತ್ರಾ ಅಜಿತ್ ಕುಮಾರ್ ಅವರ ಶಿಷ್ಯೆಯಾದ ಈಕೆ ಶ್ರೀನಿವಾಸ ಸುವರ್ಣ ಮಲ್ಲೂರು ಮತ್ತು ಕೃಪಾ ಶ್ರೀನಿವಾಸ ದಂಪತಿ ಪುತ್ರಿ. ಇವರು ವಾಮಂಜೂರು ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.