

ಮೂಲ್ಕಿ: ಸಮಾನತೆ ಮತ್ತು ಸಹಬಾಳ್ವೆಯ ಮೂಲ ತತ್ವಗಳನ್ನು ಬುನಾದಿಯಾಗಿಸಿ ಸಮಾಜದ ದೀನ ವರ್ಗಕ್ಕೆ ಉಪಕಾರಿಯಾಗುವ ಯೋಜನೆಗಳನ್ನು ನೀಡುವ ರೋಟರಿ ಕಾರ್ಯ ಸ್ತುತ್ಯರ್ಹ ಎಂದು ಹಿರಿಯ ವಾಗ್ಮಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಹೇಳಿದರು.
ಮೂಲ್ಕಿ ರೋಟರಿ ಕ್ಲಬ್ ಆಶ್ರಯದಲ್ಲಿ ಎಂಆರ್ಪಿಎಲ್ ಪ್ರಾಯೋಜಕತ್ವದ ಆಂಬುಲೆನ್ಸ್ ಲೋಕಾರ್ಪಣೆ ಬಳಿಕ ರೋಟರಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಂಬುಲೆನ್ಸ್ ಲೋಕಾರ್ಪಣೆಗೈದು ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ವಿಕ್ರಮ್ ದತ್ತಾ, ರೋಟರಿ ವಿವಿಧ ೇತ್ರಗಳಲ್ಲಿ ಸೇವಾ ಕಾರ್ಯ ನೀಡುವ ಮೂಲಕ ವಿಶ್ವದಲ್ಲಿ ಅದ್ವೀತಿಯ ಸಂಸ್ಥೆಯಾಗಿ ಬೆಳೆದಿದ್ದು, ಮೂಲ್ಕಿ ರೋಟರಿ ಉತ್ತಮ ಸೇವೆಗಳನ್ನು ಮಾಡುತ್ತಾ ಎಲ್ಲರ ಗಮನ ಸೆಳೆದಿದೆ ಎಂದರು.
ಮೂಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಪ್ರೀತಮ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮೂಲ್ಕಿ ಚರ್ಚ್ ಧರ್ಮಗುರು ಆಂಟನಿ ಶೇರಾ, ಕಾರ್ನಾಡು ಮಸೀದಿ ಧರ್ಮಗುರು ಅಲ್ಹಾಜ್ ಇಸ್ಮಾಯಿಲ್ ದಾರಿಮಿ, ಎಂಆರ್ಪಿಎಲ್ನ ಎಚ್ಆರ್ ವಿಭಾಗದ ಅಧಿಕಾರಿ ಸ್ಟೀವನ್ ಪಿಂಟೋ ಎಂ., ರೋಟರಿ ಸಹಾಯಕ ಗವರ್ನರ್ ಶರತ್ ಶೆಟ್ಟಿ, ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ., ಸಮುದಾಯ ಆರೋಗ್ಯ ಕೇಂದ್ರದ ವ್ಯೆದ್ಯಾಧಿಕಾರಿ ಡಾ.ಕೃಷ್ಣ, ಟೂರಿಸ್ಟ್ ಕಾರು ಮತ್ತು ಟೆಂಪೋ ಚಾಲಕರ ಸಂದ ಅಧ್ಯಕ್ಷ ಪ್ರಕಾಶ್ ಶೆಣೈ, ಮೂಲ್ಕಿ ರೋಟರಿ ಕಾರ್ಯದರ್ಶಿ ಜೇಮ್ಸ್ ಪೀಟರ್ ಡಿಸೋಜ, ಸಮುದಾಯ ಸೇವಾ ಅಧ್ಯೆ ಭಾನುಮತಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿನರಾಜ್ ಸಾಲ್ಯಾನ್ ನಿರೂಪಿಸಿದರು.