ವಿವೇಕಾನಂದರ ಜೀವನ ಪುಟ ಯುವಪೀಳಿಗೆಗೆ ದಾರಿದೀಪ: ವಕೀಲ ರವೀಶ್​ ಕಾಮತ್​ ಅಭಿಪ್ರಾಯ

Mul_Vivekananda
Published on

ಮೂಲ್ಕಿ: ಸ್ವಾಮಿ ವಿವೇಕಾನಂದರ ಜೀವನದ ಪುಟಗಳು ಯುವಪೀಳಿಗೆಗೆ ಬಹು ದೊಡ್ಡ ಮಾಗದರ್ಶಿಯಾಗಿದ್ದು ಅವರ ಬದುಕಿನ ಸಿದ್ಧಾಂತವನ್ನು ಯುವಪೀಳಿಗೆ ಅನುಸರಿಸಿದಲ್ಲಿ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ವಕೀಲ ರವೀಶ್​ ಕಾಮತ್​ ಹೇಳಿದರು.

ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಂಗಳೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್​ ಬೈಕಂಪಾಡಿ, ಪಡುಪಣಂಬೂರುಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಫೇಮಸ್​ ಯೂತ್​ ಕ್ಲಬ್​ ಮತ್ತು ಮಹಿಳಾ ಮಂಡಲ 10ನೇ ತೋಕೂರು, ಹಳೆಯಂಗಡಿ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಫೇಮಸ್​ ಯೂತ್​ ಕ್ಲಬ್​ ಅಧ್ಯಕ್ಷ ಭಾಸ್ಕರ್​ ಅಮೀನ್​ ತೋಕೂರು ಅಧ್ಯಕ್ಷತೆ ವಹಿಸಿದ್ದರು. ರೋಟರಿ ಕ್ಲಬ್​ ಬೈಕಂಪಾಡಿ ಅಧ್ಯಕ್ಷ ಹರೀಶ್​ ಬಿ.ಶೆಟ್ಟಿ, ಫೇಮಸ್​ ಯೂತ್​ ಕ್ಲಬ್​ ಹಿರಿಯ ಮಾರ್ಗದರ್ಶಕ ಗಣೇಶ್​ ಜಿ.ಬಂಗೇರ, ರೋಟರಿ ಸಮುದಾಯ ದಳದ ಅಧ್ಯಕ್ಷ ಸಂಪತ್​ ಜೆ.ಶೆಟ್ಟಿ ಉಪಸ್ಥಿತರಿದ್ದರು. ಮೋಹನ್​ ದಾಸ್​ ಸ್ವಾಗತಿಸಿದರು. ಕಾರ್ಯದರ್ಶಿ ಹಿಮಕರ್​ ಕೋಟ್ಯಾನ್​ ವಂದಿಸಿದರು. ಸಂಪತ್​ ಜೆ.ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net