ಶ್ರೀಮುರಳಿ ಹೊಸ ಚಿತ್ರ 'ಬಘೀರ' ...

Bagheera - Final
Published on

ಬೆಂಗಳೂರು: ಕೆಲವು ದಿನಗಳ ಹಿಂದಷ್ಟೇ ಹೊಂಬಾಳೆ ಫಿಲಂಸ್​ ಫಿಲಂಸ್​ನಿಂದ ಹೊಸದೊಂದು ಪ್ರಕಟಣೆ ಹೊರಬಿದ್ದಿತ್ತು. ಡಿಸೆಂಬರ್​ 17ರಂದು, ಬೆಳಿಗ್ಗೆ 11.59ಕ್ಕೆ ಸಂಸ್ಥೆಯ ನಿರ್ಮಾಣದ ಎಂಟನೇ ಚಿತ್ರವನ್ನು ಘೋಷಿಸುವುದಾಗಿ ಹೇಳಲಾಗಿತ್ತು. ಈ ಚಿತ್ರದಲ್ಲಿ ಯಾರು ನಟಿಸುತ್ತಾರೆ? ಯಾರು ನಿರ್ದೇಶಿಸುತ್ತಾರೆ ಎಂಬ ವಿಷಯಗಳೆಲ್ಲಾ ಗೌಪ್ಯವಾಗಿಡಲಾಗಿತ್ತು.

ಈ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ, ಇದು ಯಾವ ಚಿತ್ರ ಮತ್ತು ಯಾರು ಅಭಿನಯಿಸಬಹುದು ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಈ ಚಿತ್ರದಲ್ಲಿ ನಟಿ ಶ್ರೀಮುರಳಿ ಅಭಿನಯಿಸುತ್ತಾರೆ ಎಂಬ ಸುದ್ದಿ ಇತ್ತು. ಇಂದು ಅವರ ಹುಟ್ಟುಹಬ್ಬವಾದ್ದರಿಂದ, ಅದರ ಪ್ರಯುಕ್ತ ಹೊಸ ಚಿತ್ರ ಘೋಷಿಸಲಾಗುತ್ತದೆ ಎಂಬ ಅಂದಾಜು ನಿಜವಾಗಿದೆ.

ಹೊಂಬಾಳೆ ಫಿಲಂಸ್​ನ ಎಂಟನೇ ನಿರ್ಮಾಣದ ಚಿತ್ರದಲ್ಲಿ ಶ್ರೀಮುರಳಿ ನಟಿಸಲಿದ್ದು, ಚಿತ್ರಕ್ಕೆ 'ಬಘೀರ' ಎಂಬ ಹೆಸರನ್ನು ಇಡಲಾಗಿದೆ. ಈ ಚಿತ್ರವನ್ನು ಡಾ. ಸೂರಿ ನಿರ್ದೇಶನ ಮಾಡಿದರೆ, ಪ್ರಶಾಂತ್​ ನೀಲ್​ ಕಥೆ ಬರೆದಿದ್ದಾರೆ. ಈ ಚಿತ್ರದ ಪೋಸ್ಟರ್​ ಇದೀಗ ಬಿಡುಗಡೆಯಾಗಿದ್ದು, ಮುಂದಿನ ವರ್ಷ ಚಿತ್ರೀಕರಣ ಪ್ರಾರಂಭವಾಗಲಿದೆ.

ಈ ಚಿತ್ರದಲ್ಲಿ ಶ್ರೀಮುರಳಿ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಇನ್ನೂ ಯಾರೆಲ್ಲಾ ನಟಿಸಲಿದ್ದಾರೆ ಎಂಬ ಸುದ್ದಿ ಇನ್ನಷ್ಟೇ ಹೊರಬೀಳಬೇಕಿದೆ. 'ಬಘೀರ' ಎಂಬ ಹೆಸರನ್ನು 'ದಿ ಜಂಗಲ್​ ಬುಕ್​'ನಿಂದ ಸ್ಫೂರ್ತಿಪಡೆಯಲಾಗಿದೆ ಎಂಬುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net