More

    ಅಮಲಾ ಪೌಲ್​ಗೆ ಪವನ್ ನಿರ್ದೇಶನ; ಇದು ಸಿನಿಮಾ ಅಲ್ಲ, ವೆಬ್ ಸೀರಿಸ್​…

    ಬೆಂಗಳೂರು: ನಟ, ನಿರ್ದೇಶಕ ಮತ್ತು ನಿರ್ವಪಕ ಲೂಸಿಯಾ ಪವನ್ ಕುಮಾರ್, ಕನ್ನಡದ ಜತೆಗೆ ಪಕ್ಕದ ಟಾಲಿವುಡ್​ನಲ್ಲಿಯೂ ಪರಿಚಿತ. ಕಳೆದ ವರ್ಷ ತಮ್ಮದೇ ‘ಯೂ ಟರ್ನ್’ ಚಿತ್ರವನ್ನು ಸಮಂತಾ ಅಕ್ಕಿನೇನಿ ಅಭಿನಯದಲ್ಲಿ ತೆಲುಗಿಗೆ ರೀಮೇಕ್ ಮಾಡಿದ್ದರು. ಇದೀಗ, ತೆಲುಗು ನೆಲದಲ್ಲಿ ಮತ್ತೊಂದು ಸಾಹಸಕ್ಕೆ ಪವನ್ ಮುಂದಾಗಿದ್ದಾರೆ. ಈ ಬಾರಿ ವೆಬ್​ಸಿರೀಸ್ ನಿರ್ದೇಶನಕ್ಕಿಳಿದಿದ್ದಾರೆ.

    ‘ಕುಡಿ ಯಡಮೈತೆ’ ಶೀರ್ಷಿಕೆಯ ವೆಬ್​ಸಿರೀಸ್​ನಲ್ಲಿ ‘ಹೆಬ್ಬುಲಿ’ ಬೆಡಗಿ ಅಮಲಾ ಪೌಲ್ ಮುಖ್ಯಭೂಮಿಕೆಯಲ್ಲಿದ್ದರೆ, ಅವರಿಗೆ ರಾಹುಲ್ ವಿಜಯ್ ಜತೆಯಾಗಿದ್ದಾರೆ. ಅಷ್ಟೇ ಅಲ್ಲ ಆಕ್ಷನ್, ಕಟ್ ಹೇಳುವುದರ ಜತೆಗೆ ವೆಬ್​ಸಿರೀಸ್​ನಲ್ಲಿ ಪ್ರಮುಖ ಪಾತ್ರವೊಂದಕ್ಕೂ ಪವನ್ ಬಣ್ಣ ಹಚ್ಚುತ್ತಿದ್ದಾರೆ.

    ಅಂದಹಾಗೆ, ‘ಕುಡಿ ಯಡಮೈತೆ’ ಸೈನ್ಸ್ ಫಿಕ್ಷನ್ ಮತ್ತು ಥ್ರಿಲ್ಲರ್ ಶೈಲಿಯ ವೆಬ್​ಸಿರೀಸ್. ಅಲ್ಲು ಅರವಿಂದ್ ಒಡೆತನದ ‘ಆಹಾ’ ಓಟಿಟಿಗೋಸ್ಕರ ಈ ವೆಬ್​ಸಿರೀಸ್ ಮಾಡಲಾಗುತ್ತಿದೆ. ಒಟ್ಟು ಎಂಟು ಎಪಿಸೋಡ್​ಗಳ ಈ ವೆಬ್​ಸರಣಿಯ ಚಿತ್ರೀಕರಣ ಈಗಾಗಲೇ ಹೈದರಾಬಾದ್​ನಲ್ಲಿ ಶುರುವಾಗಿದ್ದು, ಶೇ. 25 ಭಾಗದ ಶೂಟಿಂಗ್ ಮುಗಿದಿದೆ. ಜನವರಿ ವೇಳೆಗೆ ಶೂಟಿಂಗ್ ಮುಗಿದು, ಮಾರ್ಚ್ ವೇಳೆಗೆ ಬಿಡುಗಡೆ ಆಗಲಿದೆಯಂತೆ.

    ಈ ಮೊದಲು ನೆಟ್​ಫ್ಲಿಕ್ಸ್​ನ ‘ಲೈಲಾ’ ಎಂಬ ವೆಬ್​ಸಿರೀಸ್​ನ ಕೆಲ ಎಪಿಸೋಡ್​ಗಳಿಗೆ ಪವನ್ ನಿರ್ದೇಶನ ಮಾಡಿದ್ದರು. ಇದೀಗ ‘ಕುಡಿ ಯಡಮೈತೆ’ಯ ಎಲ್ಲ ಎಪಿಸೋಡ್​ಗಳನ್ನು ಪವನ್ ನಿರ್ದೇಶಿಸಲಿದ್ದಾರೆ. ಇದರ ಜತೆಗೆ ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಸಿನಿಮಾದಲ್ಲಿಯೂ ಪವನ್ ನಟಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts